ಮುಂಬೈ: ಇಂಗ್ಲೆಂಡ್ ಕ್ರಿಕೆಟ್ ಸರಣಿಯ ಬಳಿಕ ಲಂಡನ್ ನಲ್ಲಿಯೇ ಉಳಿದುಕೊಂಡಿದ್ದ ಟೀಂ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ ತವರಿಗೆ ವಾಪಸಾಗಿದ್ದಾರೆ.
ಪತ್ನಿ ಅನುಷ್ಕಾ ಜೊತೆ ಮುಂಬೈ ವಿಮಾನ ನಿಲ್ದಾಣದಲ್ಲಿ ಕೊಹ್ಲಿ ಕಾಣಿಸಿಕೊಂಡಿದ್ದಾರೆ. ಎರಡು ವಾರಗಳಿಂದ ಕೊಹ್ಲಿ ಲಂಡನ್ ನಲ್ಲಿ ರಿಲ್ಯಾಕ್ಸ್ ಆಗಿ ಕಾಲ ಕಳೆದಿದ್ದರು.
ಸತತ ಕ್ರಿಕೆಟ್ ನಿಂದಾಗಿ ಕೊಹ್ಲಿ ಪ್ರದರ್ಶನದ ಮೇಲೆ ಪರಿಣಾಮ ಬೀರಿದೆ ಎನ್ನಲಾಗಿತ್ತು. ಇದೀಗ ಹಾಲಿಡೇ ಮುಗಿಸಿ ಬಂದಿದ್ದು, ಮತ್ತೆ ಕ್ರಿಕೆಟ್ ಕಣಕ್ಕೆ ಮರಳಲಿದ್ದಾರೆ.
ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!