Publish Date: Tue, 02 Aug 2022 (09:20 IST)
Updated Date: Tue, 02 Aug 2022 (09:33 IST)
ಸೈಂಟ್ ಕಿಟ್ಸ್: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಇಂದು ಮೂರು ಪಂದ್ಯಗಳ ಕೊನೆಯ ಟಿ20 ಪಂದ್ಯ ನಡೆಯಲಿದೆ.
ನಿನ್ನೆ ನಡೆದಿದ್ದ ದ್ವಿತೀಯ ಟಿ20 ಪಂದ್ಯವನ್ನು ವಿಂಡೀಸ್ 5 ವಿಕೆಟ್ ಗಳಿಂದ ಗೆದ್ದುಕೊಂಡಿತ್ತು. ಇದರೊಂದಿಗೆ ಸರಣಿ 1-1 ರಿಂದ ಸಮಬಲಗೊಂಡಿತ್ತು. ಹೀಗಾಗಿ ಇಂದು ಸರಣಿ ತಮ್ಮದಾಗಿಸಿಕೊಳ್ಳಲು ಎರಡೂ ತಂಡಗಳೂ ಪೈಪೋಟಿ ನಡೆಸಲಿವೆ.
ಟಿ20 ಸರಣಿಯಲ್ಲಿ ಇದುವರೆಗೆ ಭಾರತ ತಂಡ ತನ್ನ ಖ‍್ಯಾತಿಗೆ ತಕ್ಕ ಬ್ಯಾಟಿಂಗ್ ಮಾಡಿಲ್ಲ. ಸೂರ್ಯಕುಮಾರ್ ಯಾದವ್, ರಿಷಬ್ ಪಂತ್, ಶ್ರೇಯಸ್ ಅಯ್ಯರ್ ಮೂವರೂ ಕ್ಲಿಕ್ ಆಗದೇ ಇರುವುದು ಭಾರತಕ್ಕೆ ದೊಡ್ಡ ತಲೆನೋವಾಗಿದೆ. ಬೌಲರ್ ಗಳು ಎರಡೂ ಪಂದ್ಯಗಳಲ್ಲಿ ಉತ್ತಮ ದಾಳಿ ಸಂಘಟಿಸಿದ್ದಾರೆ. ಬ್ಯಾಟಿಂಗ್ ಸಿಡಿಯದೇ ಹೋದರೆ ಭಾರತಕ್ಕೆ ಗೆಲುವು ಕಷ್ಟವಾಗಲಿದೆ. ಈ ಪಂದ್ಯ ರಾತ್ರಿ 8 ಗಂಟೆಗೆ ಆರಂಭವಾಗಲಿದೆ.