Select Your Language

Notifications

webdunia
webdunia
webdunia
webdunia

ರಾಹುಲ್ ದ್ರಾವಿಡ್ ಜೊತೆ ಹೊಂದಾಣಿಕೆ ಕೊರತೆಯಿಂದ ನಾಯಕತ್ವ ತೊರೆದ್ರಂತೆ ವಿರಾಟ್ ಕೊಹ್ಲಿ!

ರಾಹುಲ್ ದ್ರಾವಿಡ್ ಜೊತೆ ಹೊಂದಾಣಿಕೆ ಕೊರತೆಯಿಂದ ನಾಯಕತ್ವ ತೊರೆದ್ರಂತೆ ವಿರಾಟ್ ಕೊಹ್ಲಿ!
ಮುಂಬೈ , ಗುರುವಾರ, 20 ಜನವರಿ 2022 (08:50 IST)
ಮುಂಬೈ: ಟೀಂ ಇಂಡಿಯಾ ಟೆಸ್ಟ್ ತಂಡದ ನಾಯಕತ್ವದಿಂದಲೂ ವಿರಾಟ್ ಕೊಹ್ಲಿ ಕೆಳಗಿಳಿಯಲು ಕಾರಣ ಅವರಿಗೆ ಕೋಚ್ ರಾಹುಲ್ ದ್ರಾವಿಡ್ ಜೊತೆಗೆ ಸಮನ್ವಯತೆಯ ಕೊರತೆ ಕಾರಣ ಎಂದು ಪಾಕ್ ಮಾಜಿ ಆಟಗಾರ ಸಲ್ಮಾನ್ ಬಟ್ ಹೇಳಿದ್ದಾರೆ.

ರಾಹುಲ್ ದ್ರಾವಿಡ್ ಎಂತಹ ಸಂದರ್ಭದಲ್ಲೂ ತಾಳ್ಮೆ ಕಳೆದುಕೊಳ್ಳದ, ಶಾಂತಮೂರ್ತಿ. ಆದರೆ ಕೊಹ್ಲಿ ತದ್ವಿರುದ್ಧ. ಆಕ್ರಮಣಕಾರಿ ಹಾಗೂ ಬೇಗನೇ ತಾಳ್ಮೆ ಕಳೆದುಕೊಳ್ಳುತ್ತಾರೆ. ಹೀಗಾಗಿ ಇಬ್ಬರ ನಡುವೆ ಹೊಂದಾಣಿಕೆ ಕೊರತೆಯಿಂದಲೇ ಕೊಹ್ಲಿ ನಾಯಕತ್ವ ತ್ಯಜಿಸಿದರು ಎಂಬುದು ಸಲ್ಮಾನ್ ಅಭಿಪ್ರಾಯ.

ಆದರೆ ಕೊಹ್ಲಿ ಅಭ್ಯಾಸದ ವೇಳೆ ಖುದ್ದ ತಾವೇ ಮುಂದೆ ನಿಂತು ದ್ರಾವಿಡ್ ಸಹಾಯ ಮಾಡುತ್ತಿದ್ದರು. ಇತ್ತ ಕೊಹ್ಲಿ ಕೂಡಾ ದ್ರಾವಿಡ್ ಜೊತೆ ತಂಡದ ಅಭ್ಯಾಸದ ವೇಳೆ ಮಾತುಕತೆ ನಡೆಸುತ್ತಿದ್ದರು. ಹೀಗಾಗಿ ಇದೆಲ್ಲಾ ಊಹಪೋಹವಷ್ಟೇ ಎನ್ನುವುದು ಇನ್ನು ಕೆಲವರ ಅಭಿಪ್ರಾಯ. ಕೊಹ್ಲಿ ನಾಯಕತ್ವ ತ್ಯಜಿಸುತ್ತಿರುವ ನಿರ್ಧಾರವನ್ನು ಮೊದಲು ಹೇಳಿದ್ದೂ ದ್ರಾವಿಡ್ ಗೆ ಎನ್ನಲಾಗಿದೆ. ಆದರೆ ತಮ್ಮ ವಿದಾಯ ಪ್ರಕಟಣೆಯಲ್ಲಿ ದ್ರಾವಿಡ್ ಬಗ್ಗೆ ಒಂದೇ ಮಾತು ಉಲ್ಲೇಖಿಸಿಲ್ಲ ಎನ್ನುವುದನ್ನೂ ಗಮನಿಸಬೇಕು.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ-ದ.ಆಫ್ರಿಕಾ ಏಕದಿನ: ಟೀಂ ಇಂಡಿಯಾಗೆ ಸೋಲಿನ ಆರಂಭ