Select Your Language

Notifications

webdunia
webdunia
webdunia
webdunia

ಭಾರತ-ದ.ಆಫ್ರಿಕಾ ಏಕದಿನ: ಟೀಂ ಇಂಡಿಯಾಗೆ ಸೋಲಿನ ಆರಂಭ

ಭಾರತ-ದ.ಆಫ್ರಿಕಾ ಏಕದಿನ: ಟೀಂ ಇಂಡಿಯಾಗೆ ಸೋಲಿನ ಆರಂಭ
ಪಾರ್ಲ್ , ಗುರುವಾರ, 20 ಜನವರಿ 2022 (08:31 IST)
ಪಾರ್ಲ್: ಭಾರತ ಮತ್ತು ದ.ಆಫ್ರಿಕಾ ನಡುವಿನ ಏಕದಿನ ಸರಣಿಯನ್ನು ಟೀಂ ಇಂಡಿಯಾ ಸೋಲಿನೊಂದಿಗೆ ಆರಂಭಿಸಿದೆ. ಮೊದಲ ಪಂದ್ಯದಲ್ಲಿ 31 ರನ್ ಗಳ ಸೋಲಾಗಿದೆ.

ಬವುಮ-ಡುಸೆನ್ ಶತಕದ ಜೊತೆಯಾಟದಿಂದಾಗಿ ದ.ಆಫ್ರಿಕಾ ಮೊದಲು ಬ್ಯಾಟಿಂಗ್ ಮಾಡಿ 296 ರನ್ ಗಳಿಸಿತು. ಇಂದಿನ ಟಿ20 ಯುಗದಲ್ಲಿ ಈ ಮೊತ್ತ ಬೆನ್ನತ್ತುವುದು ಅಸಾಧ್ಯವೇನೋ ಅಲ್ಲ.

ಆದರೆ ಭಾರತಕ್ಕೆ ಕೆಳ ಕ್ರಮಾಂಕದ ಬ್ಯಾಟಿಗರು ಕೈ ಕೊಟ್ಟರು. ಆರಂಭಿಕ ಶಿಖರ್ ಧವನ್ 79, ವಿರಾಟ್ ಕೊಹ್ಲಿ 51 ರನ್ ಗಳಿಸಿ ಉತ್ತಮ ವೇದಿಕೆ ಕಲ್ಪಿಸಿಕೊಟ್ಟರು. ಆದರೆ ರಿಷಬ್ ಪಂತ್-ಶ್ರೇಯಸ್ ಜೋಡಿ ಕೊಂಚ ಹೊತ್ತು ನಿಂತು ಆಡಿದ್ದರೆ ಪಂದ್ಯ ಟೀಂ ಇಂಡಿಯಾ ಪಾಲಾಗುತ್ತಿತ್ತು. ಆದರೆ ಐಯರ್ ಕೇವಲ 17 ರನ್ ಗೆ ವಿಕೆಟ್ ಒಪ್ಪಿಸಿದರೆ ಅವರ ಬೆನ್ನಿಗೇ ರಿಷಬ್ ಕೂಡಾ 16 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು.

ಶ್ರಾದ್ಧೂಲ್ ಠಾಕೂರ್ ಬಿರುಸಿನ 50 ರನ್ ಗಳಿಸಿದರಾದರೂ ಅವರಿಗೆ ತಕ್ಕ ಸಾಥ್ ಸಿಗದೇ ಹೋಯಿತು. ಮಹತ್ವದ ಹಂತದಲ್ಲಿ ತಕ್ಕ ಜೊತೆಯಾಟವಿಲ್ಲದೇ ಟೀಂ ಇಂಡಿಯಾ ಅಂತಿಮವಾಗಿ 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 265 ರನ್ ಗಳಿಸಲಷ್ಟೇ ಶಕ್ತವಾಯಿತು.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ-ದ.ಆಫ್ರಿಕಾ ಏಕದಿನ: ಟೀಂ ಇಂಡಿಯಾಕ್ಕೆ ಕಂಟಕವಾದ ದುಸೆನ್-ಬವುಮಾ