Webdunia - Bharat's app for daily news and videos

Install App

ಭಾರತ-ದ.ಆಫ್ರಿಕಾ ಟೆಸ್ಟ್: ಟೆಸ್ಟ್ ಸ್ಪೆಷಲಿಸ್ಟ್ ಪೂಜಾರಗಿಂತಲೂ ನಿಧಾನಿಯಾದ ಕೊಹ್ಲಿ

Webdunia
ಮಂಗಳವಾರ, 11 ಜನವರಿ 2022 (17:05 IST)
ಕೇಪ್ ಟೌನ್: ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ ಪೂಜಾರ ಎಂದರೆ ರನ್ ಗಳಿಸುವುದರಲ್ಲಿ ಅತ್ಯಂತ ನಿಧಾನಿ ಎಂದೇ ಚಿರಪರಿಚಿತ. ಆದರೆ ಇಂದಿನ ದಿನದಾಟದಲ್ಲಿ ಹೊಡೆಬಡಿಯ ಆಟಕ್ಕೆ ಹೆಸರಾಗಿರುವ ವಿರಾಟ್ ಕೊಹ್ಲಿ, ಪೂಜಾರಗಿಂತಲೂ ನಿಧಾನವಾಗಿ ಇನಿಂಗ್ಸ್ ಕಟ್ಟುವುದರತ್ತ ಗಮನ ಹರಿಸಿದ್ದಾರೆ.
 

ಭಾರತ ಮತ್ತು ದ.ಆಫ್ರಿಕಾ ನಡುವಿನ ಮೂರನೇ ಟೆಸ್ಟ್ ಪಂದ್ಯದ ಮೊದಲ  ದಿನದಾಟದಲ್ಲಿ ಟೀಂ ಇಂಡಿಯಾ ಇತ್ತೀಚೆಗಿನ ವರದಿ ಬಂದಾಗ 2 ವಿಕೆಟ್ ನಷ್ಟಕ್ಕೆ 81 ರನ್ ಗಳಿಸಿದೆ. ನಾಯಕ ಕೊಹ್ಲಿ 67 ಎಸೆತಗಳನ್ನು ಎದುರಿಸಿ ಗಳಿಸಿದ್ದು 16 ರನ್ ಮಾತ್ರ. ಆದರೆ ಪೂಜಾರ 64 ಎಸೆತಗಳಿಂದ 34 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ.

ಆದರೆ ಇವರಿಬ್ಬರ ಎಚ್ಚರಿಕೆಯ ಆಟದ ಫಲವಾಗಿ ಭಾರತ ಈಗ ಎರಡನೇ ಅವಧಿಯಲ್ಲಿ ಕೊಂಚ ಸುಧಾರಿಸಿಕೊಂಡಿದೆ. ಆರಂಭದಲ್ಲೇ ಕೆಎಲ್ ರಾಹುಲ್ (12 ರನ್) ಮತ್ತು ಮಯಾಂಕ್ ಅಗರ್ವಾಲ್ (15) ವಿಕೆಟ್ ಒಪ್ಪಿಸಿದ್ದರಿಂದ ಭಾರತಕ್ಕೆ ಆಘಾತ ಸಿಕ್ಕಿತ್ತು. ಆದರೆ ಈಗ ಕೊಹ್ಲಿ-ಪೂಜಾರ ಜೋಡಿ ಎಚ್ಚರಿಕೆಯ ಆಟದಿಂದ ಟೀಂ ಇಂಡಿಯಾಕ್ಕೆ ಚೇತರಿಕೆ ನೀಡಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs ENG: ದ್ವಿತೀಯ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಗ್ಯಾರಂಟಿ

ಹಲವು ಮಹಿಳೆಯರೊಂದಿಗೆ ಆಫೇರ್‌, ಆರ್‌ಸಿಬಿ ಆಟಗಾರನ ವಿರುದ್ಧ ಮಹಿಳೆ ದೂರು

ರಿಷಭ್ ಪಂತ್ ಸೋಮರ್ ಸಾಲ್ಟ್ ಸೆಲೆಬ್ರೇಷನ್ ಅಪಾಯಕಾರಿಯಾ: ವೈದ್ಯರ ಶಾಕಿಂಗ್ ಪ್ರತಿಕ್ರಿಯೆ

ಏಷ್ಯನ್ ಕಪ್‌ 2025, ಪಹಲ್ಗಾಮ್ ದಾಳಿ ಬಳಿಕ ಭಾರತ, ಪಾಕಿಸ್ತಾನ ಮುಖಾಮುಖಿ ಸಾಧ್ಯತೆ

ಗಿಲ್ ನಾಯಕತ್ವಕ್ಕೆ ಫುಲ್ ಮಾರ್ಕ್ಸ್‌ ನೀಡಿದ ಕನ್ನಡಿಗ ಪ್ರಸಿದ್ಧ್‌ ಕೃಷ್ಣ

ಮುಂದಿನ ಸುದ್ದಿ
Show comments