Publish Date: Tue, 11 Jan 2022 (16:40 IST)
Updated Date: Tue, 11 Jan 2022 (16:54 IST)
ಕೇಪ್ ಟೌನ್: ಟೀಂ ಇಂಡಿಯಾ ಕ್ರಿಕೆಟ್ ದಿಗ್ಗಜ, ಹಾಲಿ ಕೋಚ್ ರಾಹುಲ್ ದ್ರಾವಿಡ್ ಗೆ ಇಂದು ಜನ್ಮದಿನದ ಸಂಭ್ರಮ. ಇದೇ ದಿನ ಟೀಂ ಇಂಡಿಯಾ ದ.ಆಫ್ರಿಕಾ ವಿರುದ್ಧ ಮೂರನೇ ಟೆಸ್ಟ್ ಪಂದ್ಯವಾಡುತ್ತಿದೆ. ಈ ಪಂದ್ಯಕ್ಕೆ ಮುನ್ನ ದ್ರಾವಿಡ್ ತಮ್ಮ ಹುಟ್ಟುಹಬ್ಬದ ಬಗ್ಗೆ ಮಾತನಾಡಿದ್ದಾರೆ.
ಟಾಸ್ ಗೂ ಮುನ್ನ ಮಾತನಾಡಿದ ರಾಹುಲ್ ದ್ರಾವಿಡ್ ತಮಗೆ ಶುಭ ಕೋರಿದವರಿಗೆ ಧನ್ಯವಾದ ಸಲ್ಲಿಸಿದ್ದಾರೆ. ಹುಟ್ಟುಹಬ್ಬದ ಶುಭಾಶಯ ಖುಷಿಯ ಅನುಭವ ಕೊಡುತ್ತದೆ ಎಂದಿದ್ದಾರೆ.
ವಯಸ್ಸು ಹೆಚ್ಚಾಗುತ್ತಿದ್ದಂತೇ ಬರ್ತ್ ಡೇ ಶುಭಾಶಯಗಳಿಗೆ ಹೇಗೆ ಪ್ರತಿಕ್ರಿಯಿಸಬೇಕೋ ಗೊತ್ತಾಗಲ್ಲ. ಆದರೆ ಇದೊಂಥರಾ ಖುಷಿಯ ಅನುಭವ. ನನ್ನ ಸ್ನೇಹಿತರು, ಕುಟುಂಬದವರಿಗೆ ಸಾಕಷ್ಟು ಶುಭಾಶಯಗಳು ಬಂದಿವೆ ಎಂದಿದ್ದಾರೆ.