Select Your Language

Notifications

webdunia
webdunia
webdunia
webdunia

‘ವಾಲ್’ ರಾಹುಲ್ ದ್ರಾವಿಡ್ ಬರ್ತ್ ಡೇ: ಅರ್ಧಶತಕಕ್ಕೆ ಇನ್ನೊಂದೇ ಮೆಟ್ಟಿಲು!

ರಾಹುಲ್ ದ್ರಾವಿಡ್
ಕೇಪ್ ಟೌನ್ , ಮಂಗಳವಾರ, 11 ಜನವರಿ 2022 (10:10 IST)
ಕೇಪ್ ಟೌನ್: ಟೀಂ ಇಂಡಿಯಾ ಕಂಡ ದಿಗ್ಗಜ ಕ್ರಿಕೆಟಿಗ, ಹಾಲಿ ಕೋಚ್ ರಾಹುಲ್ ದ್ರಾವಿಡ್ ಗೆ ಇಂದು ಜನ್ಮದಿನದ ಸಂಭ್ರಮ. ಕ್ರಿಕೆಟ್ ನ ಸಜ್ಜನ, ಸ್ಪೂರ್ತಿದಾಯಕ ಆಟಗಾರ ಎಂದೇ ಖ್ಯಾತರಾಗಿರುವ ದ್ರಾವಿಡ್ ಗೆ ಇಂದು ಐಸಿಸಿ, ಬಿಸಿಸಿಐ ಸೇರಿದಂತೆ ಕ್ರಿಕೆಟ್ ಲೋಕ, ಸೆಲೆಬ್ರಿಟಿಗಳು ಶುಭಾಶಯಗಳ ಸುರಿಮಳೆಗೈಯುತ್ತಿದ್ದಾರೆ.

49 ನೇ ವಸಂತಕ್ಕೆ ಕಾಲಿಟ್ಟಿರುವ ದ್ರಾವಿಡ್ ಗೆ ಜೀವನದಲ್ಲಿ ಅರ್ಧಶತಕಕ್ಕೇರಲು ಇನ್ನೊಂದೇ ವರ್ಷ ಬಾಕಿ! ಇಂದಿನಿಂದ ಟೀಂ ಇಂಡಿಯಾ ದ.ಆಫ್ರಿಕಾ ವಿರುದ್ಧ ಮಹತ್ವದ ಟೆಸ್ಟ್ ಪಂದ್ಯವಾಡಲಿದ್ದು, ಒಂದು ವೇಳೆ ಟೀಂ ಇಂಡಿಯಾ ಈ ಪಂದ್ಯ ಗೆದ್ದರೆ ಕೋಚ್ ಆಗಿ ದ್ರಾವಿಡ್ ಗೆ ಅದುವೇ ದೊಡ್ಡ ಗಿಫ್ಟ್ ಆಗಲಿದೆ.

ಇನ್ನು, ದ್ರಾವಿಡ್ ಬರ್ತ್ ಡೇಗೆ ಅಸಂಖ್ಯಾತ ಅಭಿಮಾನಿಗಳು ವಿಶೇಷ ವಿಡಿಯೋ, ಫೋಟೋ, ಮೆಮೆಗಳ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ವಿಶ್ ಮಾಡುತ್ತಿದ್ದಾರೆ. ಇದಲ್ಲದೆ, ಐಸಿಸಿ, ಬಿಸಿಸಿಐ ದ್ರಾವಿಡ್ ಸಾಧನೆಗಳ ವಿವರ ನೋಡಿ ದಿಗ್ಗಜನಿಗೆ ಗೌರವ ಸಲ್ಲಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ-ವೆಸ್ಟ್ ಇಂಡೀಸ್ ಕ್ರಿಕೆಟ್ ಸರಣಿಗೆ ಕೊರೋನಾ ಅಡ್ಡಿ?