Select Your Language

Notifications

webdunia
webdunia
webdunia
webdunia

ವಿರಾಟ್ ಕೊಹ್ಲಿ ಹುಟ್ಟುಹಬ್ಬದ ದಿನ ಪಂದ್ಯ: ಈಡನ್ ಗಾರ್ಡನ್ ನಲ್ಲಿ ಇರಲಿದೆ ಸರ್ಪೈಸ್!

ವಿರಾಟ್ ಕೊಹ್ಲಿ ಹುಟ್ಟುಹಬ್ಬದ ದಿನ ಪಂದ್ಯ: ಈಡನ್ ಗಾರ್ಡನ್ ನಲ್ಲಿ ಇರಲಿದೆ ಸರ್ಪೈಸ್!
ಕೋಲ್ಕೊತ್ತಾ , ಬುಧವಾರ, 1 ನವೆಂಬರ್ 2023 (06:35 IST)
ಕೋಲ್ಕೊತ್ತಾ: ನವಂಬರ್ 5 ರಂದು ವಿರಾಟ್ ಕೊಹ್ಲಿ ಫ್ಯಾನ್ಸ್ ಗೆ ವಿಶೇಷ ದಿನ. ಈ ದಿನ ಕಿಂಗ್ ಕೊಹ್ಲಿಯ ಜನ್ಮದಿನವಾಗಿದ್ದು ಪ್ರತಿವರ್ಷ ಅಭಿಮಾನಿಗಳ ಪಾಲಿಗೆ ಹಬ್ಬ. ಆದರೆ ಈ ಬಾರಿ ಈ ದಿನ ಇನ್ನಷ್ಟು ವಿಶೇಷವಾಗಲಿದೆ.

ಕಾರಣ ಇದೇ ದಿನ ಕೋಲ್ಕೊತ್ತಾ ಈಡನ್ ಗಾರ್ಡನ್ ಮೈದಾನದಲ್ಲಿ ಭಾರತ ಮತ್ತು ದ.ಆಫ್ರಿಕಾ ನಡುವೆ ಏಕದಿನ ವಿಶ್ವಕಪ್ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಕೊಹ್ಲಿ ಬ್ಯಾಟಿಂಗ್ ನೋಡಲು ಜನ ಕಾಯುತ್ತಿದ್ದಾರೆ. ಈ ವಿಶೇಷ ದಿನದಂದು ಕೊಹ್ಲಿ ಶತಕ ಸಿಡಿಸುತ್ತಾರೆ ಎಂದು ಅನೇಕರು ಭರವಸೆಯಲ್ಲಿದ್ದಾರೆ.

ಇನ್ನು, ಈ ವಿಶೇಷ ದಿನಕ್ಕಾಗಿ ಕೋಲ್ಕೊತ್ತಾ ಈಡನ್ ಗಾರ್ಡನ್ ನಲ್ಲಿ ವಿಶೇಷ ತಯಾರಿ ನಡೆದಿದೆ.  ವಿಶ್ವಕಪ್ ವೀಕ್ಷಣೆಗೆ ಬರುವ ಪ್ರೇಕ್ಷಕರಿಗೆ ಕೊಹ್ಲಿ ಮಾಸ್ಕ್ ವಿತರಿಸಲು ಕೋಲ್ಕೊತ್ತಾ ಕ್ರಿಕೆಟ್ ಅಸೋಸಿಯೇಷನ್ ಯೋಜನೆ ರೂಪಿಸಿದೆ. ಅಲ್ಲದೆ ಪಂದ್ಯಕ್ಕೆ ಮೊದಲು ಕೇಕ್ ಕಟ್ಟಿಂಗ್ ಮಾಡಿ ಕೊಹ್ಲಿಗೆ ಸನ್ಮಾನಿಸುವ ಕಾರ್ಯಕ್ರಮವಿರಲಿದೆ. ಅಂದು ಇಡೀ ಮೈದಾನ ಕೊಹ್ಲಿ ಮಾಸ್ಕ್ ತೊಟ್ಟು ಪಂದ್ಯ ವೀಕ್ಷಿಸಲಿದೆ!

Share this Story:

Follow Webdunia kannada

ಮುಂದಿನ ಸುದ್ದಿ

ಪಾಕ್ ವಿರುದ್ಧ ಸೋಲು: ವಿಶ್ವಕಪ್ ನಿಂದ ಹೊರಬಿದ್ದ ಬಾಂಗ್ಲಾದೇಶ