Publish Date: Tue, 31 Oct 2023 (09:50 IST)
Updated Date: Tue, 31 Oct 2023 (09:25 IST)
ಲಕ್ನೋ: ಹಾಲಿ ಚಾಂಪಿಯನ್ಸ್ ಇಂಗ್ಲೆಂಡ್ ಗೆ ಸೋಲುಣಿಸಿದ ಟೀಂ ಇಂಡಿಯಾ ವಿಶ್ವಕಪ್ ನಲ್ಲಿ ತನ್ನ ಅಜೇಯ ಓಟ ಮುಂದುವರಿಸಿದೆ.
ಇದುವರೆಗೆ ಆಡಿದ ಆರು ಪಂದ್ಯಗಳಿಂದ ಆರನ್ನೂ ಗೆದ್ದ ಟೀಂ ಇಂಡಿಯಾ 12 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಇದೀಗ ಮುಂದಿನ ಪಂದ್ಯದಲ್ಲಿ ಭಾರತ ತಂಡ ಶ್ರೀಲಂಕಾವನ್ನು ಎದುರಿಸಲಿದೆ.
ಈ ಪಂದ್ಯ ನವಂಬರ್ 2 ರಂದು ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆಯಲಿದೆ. ಇದಕ್ಕೆ ಮೊದಲು 2011 ರ ವಿಶ್ವಕಪ್ ಫೈನಲ್ ನಲ್ಲಿ ಟೀಂ ಇಂಡಿಯಾ ಇದೇ ಮೈದಾನದಲ್ಲಿ ಲಂಕಾವನ್ನು ಫೈನಲ್ ನಲ್ಲಿ ಸೋಲಿಸಿ ಪ್ರಶಸ್ತಿ ಗೆದ್ದುಕೊಂಡಿದೆ. ನಾಯಕ ರೋಹಿತ್ ತವರಾಗಿರುವ ಮುಂಬೈನಲ್ಲೂ ಟೀಂ ಇಂಡಿಯಾವೇ ಮೇಲುಗೈ ಸಾಧಿಸುವ ಸಾಧ‍್ಯತೆಗಳೇ ಹೆಚ್ಚು.