Publish Date: Mon, 30 Oct 2023 (16:43 IST)
Updated Date: Mon, 30 Oct 2023 (16:44 IST)
ಮುಂಬೈ: ಏಕದಿನ ವಿಶ್ವಕಪ್ ಕ್ರಿಕೆಟ್ ಕೂಟದಲ್ಲಿ ಮುಂದಿನ ಪಂದ್ಯವಾಡಲು ಟೀಂ ಇಂಡಿಯಾ ಮುಂಬೈಗೆ ಬಂದಿಳಿದಿದೆ.
ಭಾರತ ಮುಂದಿನ ಪಂದ್ಯವನ್ನು ನವಂಬರ್ 2 ರಂದು ಶ್ರೀಲಂಕಾ ವಿರುದ್ಧ ಆಡಲಿದೆ. ಈ ಪಂದ್ಯ ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆಯುವುದು. ನಿನ್ನೆಯಷ್ಟೇ ಇಂಗ್ಲೆಂಡ್ ವಿರುದ್ಧ ಲಕ್ನೋದಲ್ಲಿ ನಡೆದ ಪಂದ್ಯವನ್ನು ಟೀಂ ಇಂಡಿಯಾ 100 ರನ್ ಗಳಿಂದ ಗೆದ್ದುಕೊಂಡಿತ್ತು.
ಇಂದು ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಮುಂಬೈಗೆ ಬಂದಿಳಿದಿದೆ. ನಾಯಕ ರೋಹಿತ್ ಶರ್ಮಾಗೆ ಇದು ತವರಿನಲ್ಲಿ ನಡೆಯುವ ಪಂದ್ಯವಾಗಿದೆ.