Select Your Language

Notifications

webdunia
webdunia
webdunia
webdunia

ಏಕದಿನ ವಿಶ್ವಕಪ್ ಕ್ರಿಕೆಟ್: ಸೆಮಿಫೈನಲ್ ಗೇರಿದ ಮೊದಲ ತಂಡ ಟೀಂ ಇಂಡಿಯಾ

ಏಕದಿನ ವಿಶ್ವಕಪ್ ಕ್ರಿಕೆಟ್: ಸೆಮಿಫೈನಲ್ ಗೇರಿದ ಮೊದಲ ತಂಡ ಟೀಂ ಇಂಡಿಯಾ
ಲಕ್ನೋ , ಸೋಮವಾರ, 30 ಅಕ್ಟೋಬರ್ 2023 (09:10 IST)
Photo Courtesy: Twitter
ಲಕ್ನೋ: ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ 2023 ರಲ್ಲಿ ಸೆಮಿಫೈನಲ್ ನಲ್ಲಿ ಸ್ಥಾನ ಖಚಿತಪಡಿಸಿದ ಮೊದಲ ತಂಡವೆಂಬ ಹೆಗ್ಗಳಿಕೆ ಟೀಂ ಇಂಡಿಯಾದ್ದಾಗಿದೆ.

ಇಂಗ್ಲೆಂಡ್ ವಿರುದ್ಧ ನಿನ್ನೆ ನಡೆದ ಪಂದ್ಯವನ್ನು 100 ರನ್ ಗಳಿಂದ ಭರ್ಜರಿಯಾಗಿ ಗೆದ್ದುಕೊಂಡ ಟೀಂ ಇಂಡಿಯಾ ಸೆಮಿಫೈನಲ್ ಗೆ ಅರ್ಹತೆ ಪಡೆದಿದೆ. 20 ವರ್ಷಗಳ ಬಳಿಕ ಏಕದಿನ ವಿಶ್ವಕಪ್ ನಲ್ಲಿ ಇಂಗ್ಲೆಂಡ್ ತಂಡವನ್ನು ರೋಹಿತ್ ಪಡೆ ಸೋಲಿಸಿದೆ.

ಇದೀಗ ಆರು ಪಂದ್ಯಗಳಿಂದ ಆರನ್ನೂ ಗೆದ್ದು 12 ಅಂಕ ಸಂಪಾದಿಸಿರುವ ಟೀಂ ಇಂಡಿಯಾ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದೆ. ಮುಂದಿನ ಮೂರು ಲೀಗ್ ಪಂದ್ಯಗಳನ್ನು ಸೋತರೂ ಟೀಂ ಇಂಡಿಯಾಗೆ ಸೆಮಿಫೈನಲ್ ಅವಕಾಶವಿರಲಿದೆ. ಆದರೆ ನಂ.1 ತಂಡವಾಗಿಯೇ ಪ್ರವೇಶಿಸಬೇಕಾದರೆ ಕನಿಷ್ಠ ಎರಡು ಪಂದ್ಯಗಳನ್ನಾದರೂ ಗೆಲ್ಲಲೇಬೇಕಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಭ್ಯಾಸ ಆರಂಭಿಸಿದ ರಿಷಬ್ ಪಂತ್: ಕಮ್ ಬ್ಯಾಕ್ ಯಾವಾಗ?