ಲಕ್ನೋ: ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಕ್ಯಾಚ್ ಪಡೆಯಲು ಹೋಗಿ ಇಂಗ್ಲೆಂಡ್ ಫೀಲ್ಡರ್ ಲಿಯಾಮ್ ಲಿವಿಂಗ್ ಸ್ಟೋನ್ ಗಾಯಗೊಂಡರು.
ರೋಹಿತ್ ನೀಡಿದ ಕ್ಯಾಚ್ ನ್ನು ಹಿಡಿಯುವ ಪ್ರಯತ್ನದಲ್ಲಿ ಲಿವಿಂಗ್ ಸ್ಟೋನ್ ಆಯತಪ್ಪಿ ಬಿದ್ದರು. ಹಾಗಿದ್ದರೂ ಅವರು ಕ್ಯಾಚ್ ಹಿಡಿಯುವಲ್ಲಿ ಸಫಲರಾದರು.
ಆದರೆ ಬಳಿಕ ಮೊಣಕಾಲಿನ ನೋವಿನಿಂದಾಗಿ ಮೈದಾನದಲ್ಲೇ ಕುಸಿದು ಕೂತ ಲಿವಿಂಗ್ ಸ್ಟೋನ್ ಗೆ ತಂಡದ ಫಿಸಿಯೋ ಶಶ್ರೂಷೆ ಮಾಡಿದ ಬಳಿಕ ಫೀಲ್ಡಿಂಗ್ ಮುಂದುವರಿಸಿದರು. ಮೇಲ್ನೋಟಕ್ಕೆ ಅವರ ಗಾಯ ಗಂಭೀರವಲ್ಲ ಎನಿಸುತ್ತಿದ್ದು, ಬ್ಯಾಟಿಂಗ್ ಗೆ ಮರಳುವ ನಿರೀಕ್ಷೆಯಿದೆ.