ಲಕ್ನೋ: ಐಸಿಸಿ ಏಕದಿನ ವಿಶ್ವಕಪ್ ನಲ್ಲಿ ಇಂದು ಇಂಗ್ಲೆಂಡ್ ವಿರುದ್ಧ ಕಣಕ್ಕಿಳಿಯಲಿರುವ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಬ್ಯಾಟ್ ಮಾಡಲಿ, ಮಾಡದಿರಲಿ, ಶತಕದ ಸಾಧನೆ ಮಾಡಲಿದ್ದಾರೆ!
ಹೇಗೆ ಅಂತೀರಾ? ಇಂದು ನಡೆಯಲಿರುವ ಪಂದ್ಯ ರೋಹಿತ್ ಶರ್ಮಾ ಪಾಲಿಗೆ ನಾಯಕನಾಗಿ 100 ನೇ ಪಂದ್ಯ. ಹೀಗಾಗಿ ಇಂದು ರೋಹಿತ್ ಶತಕದ ಸಾಧನೆ ಮಾಡಲಿದ್ದಾರೆ.
ರೋಹಿತ್ ಶರ್ಮಾ ಇದುವರೆಗೆ 99 ಬಾರಿ ತಂಡದ ನಾಯಕತ್ವ ವಹಿಸಿದ್ದಾರೆ. ಈ ಪೈಕಿ 73 ಪಂದ್ಯಗಳಲ್ಲಿ ಟೀಂ ಇಂಡಿಯಾ ಗೆದ್ದಿದ್ದು,23 ರಲ್ಲಿ ಸೋತಿದ್ದರೆ ಎರಡು ಪಂದ್ಯಗಳು ಡ್ರಾ ಆಗಿವೆ. ಇಂದಿನ ಐತಿಹಾಸಿಕ ಪಂದ್ಯವನ್ನು ಗೆಲ್ಲುವ ನಿರೀಕ್ಷೆ ರೋಹಿತ್ ಅಭಿಮಾನಿಗಳದ್ದಾಗಿದೆ.