Publish Date: Sun, 29 Oct 2023 (07:20 IST)
Updated Date: Sun, 29 Oct 2023 (07:34 IST)
ಲಕ್ನೋ: ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಇಂದು ಟೀಂ ಇಂಡಿಯಾ ಹಾಲಿ ಚಾಂಪಿಯನ್ ಇಂಗ್ಲೆಂಡ್ ವಿರುದ್ಧ ಪಂದ್ಯವಾಡಲಿದೆ.
ಟೀಂ ಇಂಡಿಯಾ ಈಗಾಗಲೇ ಐದು ಪಂದ್ಯಗಳ ಪೈಕಿ ಐದನ್ನೂ ಗೆದ್ದುಕೊಂಡಿದೆ. ಇಂದಿನ ಪಂದ್ಯ ಗೆದ್ದುಕೊಂಡರೆ ಸೆಮಿಫೈನಲ್ ಗೆ ಸ್ಥಾನ ಖಚಿತಪಡಿಸಲಿದೆ. ಇಂದಿನ ಪಂದ್ಯ ನಡೆಯುವ ಲಕ್ನೋ ಮೈದಾನ ಸ್ಪಿನ್ ಸ್ನೇಹಿಯಾಗಿದ್ದು, ಭಾರತವೇ ಮೇಲುಗೈ ಸಾಧಿಸುವ ನಿರೀಕ್ಷೆಯಿದೆ.
ಇಂಗ್ಲೆಂಡ್ ಈ ಟೂರ್ನಿಯಲ್ಲಿ ಆರಂಭದಿಂದಲೂ ನಿರಾಶಾದಾಯಕ ಪ್ರದರ್ಶನ ನೀಡುತ್ತಾ ಬಂದಿದೆ. ಬಲಿಷ್ಠ ಬ್ಯಾಟಿಂಗ್ ಲೈನ್ ಅಪ್ ಹೊಂದಿದ್ದರೂ ಅದಕ್ಕೆ ತಕ್ಕ ಪ್ರದರ್ಶನ ನೀಡಿಲ್ಲ. ಇದುವರೆಗೆ ಆಡಿದ ಐದು ಪಂದ್ಯಗಳಲ್ಲಿ ಆಂಗ್ಲರು ಗೆದ್ದಿದ್ದು ಕೇವಲ 1 ಪಂದ್ಯ ಮಾತ್ರ. ಹೀಗಾಗಿ ಇಂದೂ ಟೀಂ ಇಂಡಿಯಾವೇ ಗೆಲ್ಲುವ ಫೇವರಿಟ್ ತಂಡವಾಗಿದೆ. ಈ ಪಂದ್ಯ ಅಪರಾಹ್ನ 2 ಗಂಟೆಗೆ