Select Your Language

Notifications

webdunia
webdunia
webdunia
webdunia

ಪಾಕ್ ವಿರುದ್ಧ ಸೋಲು: ವಿಶ್ವಕಪ್ ನಿಂದ ಹೊರಬಿದ್ದ ಬಾಂಗ್ಲಾದೇಶ

ಪಾಕ್ ವಿರುದ್ಧ ಸೋಲು: ವಿಶ್ವಕಪ್ ನಿಂದ ಹೊರಬಿದ್ದ ಬಾಂಗ್ಲಾದೇಶ
ಕೋಲ್ಕೊತ್ತಾ , ಮಂಗಳವಾರ, 31 ಅಕ್ಟೋಬರ್ 2023 (20:36 IST)
ಕೋಲ್ಕೊತ್ತಾ: ಏಕದಿನ ವಿಶ್ವಕಪ್ ನಲ್ಲಿ ಪಾಕಿಸ್ತಾನ ವಿರುದ್ಧ 7 ವಿಕೆಟ್ ಗಳ ಸೋಲು ಅನುಭವಿಸಿದ ಬಾಂಗ್ಲಾದೇಶ ಅಧಿಕೃತವಾಗಿ ಕೂಟದಿಂದ ಹೊರಬಿದ್ದಂತಾಗಿದೆ.

ಇಂದು ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ 45.1 ಓವರ್ ಗಳಲ್ಲಿ ಕೇವಲ 204 ರನ್ ಗಳಿಗೆ ಆಲೌಟ್ ಆಯಿತು. ಪಾಕ್ ವೇಗಿ ಶಾಹಿನ್ ಅಫ್ರಿದಿ, ಮೊಹಮ್ಮ ವಾಸಿಮ್ ಜ್ಯೂನಿಯರ್ ತಲಾ 3 ವಿಕೆಟ್, ಹ್ಯಾರಿಸ್ ರೌಫ್ 2 ವಿಕೆಟ್ ಕಬಳಿಸಿದರು. ಬಾಂಗ್ಲಾ ಪರ ಲಿಟನ್ ದಾಸ್ 45, ಮಹಮ್ಮದುಲ್ಲಾ 56, ಶಕೀಬ್ ಅಲ್ ಹಸನ್ 43 ರನ್ ಗಳಿಸಿದರು.

ಈ ಮೊತ್ತ ಬೆನ್ನತ್ತಿದ ಪಾಕ್ ಸುಲಭವಾಗಿ 32.3 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 205 ರನ್ ಗಳಿಸುವ ಮೂಲಕ ಗೆಲುವಿನ ಗುರಿ ತಲುಪಿತು. ಪಾಕ್ ಪರ ಆರಂಭಿಕರಾದ ಫಕಾರ್ ಜಮಾನ್ 81, ಅಬ್ದುಲ್ಲಾ ಶಫೀಕ್ 68 ರನ್ ಗಳಿಸಿದರು. ಪಾಕ್ ಗೆ ಈ ಗೆಲುವು ಈ ವಿಶ್ವಕಪ್ ನಲ್ಲಿ ಹೆಚ್ಚು ಪ್ರಯೋಜನಕಾರಿಯಲ್ಲದಿದ್ದರೂ 2025 ರ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಅರ್ಹತೆ ಗಳಿಸುವ ನಿಟ್ಟಿನಲ್ಲಿ ಮಹತ್ವದ್ದಾಗಿದೆ. ಈ ವಿಶ್ವಕಪ್ ನಲ್ಲಿ ಅಗ್ರ ಏಳು ಸ್ಥಾನ ಪಡೆದ ತಂಡಗಳಿಗೆ ಮಾತ್ರ ಪಾಕ್ ನಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಲ್ಗೊಳ್ಳುವ ಅವಕಾಶ ಸಿಗಲಿದೆ. ಹೀಗಾಗಿ ಇಂದಿನ ಪಂದ್ಯ ಗೆದ್ದಾಗ ಪಾಕ್ ಅಗ್ರ 7 ರೊಳಗೆ ಸ್ಥಾನ ಉಳಿಸಿಕೊಳ್ಳಲು ಸಹಾಯವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಎಲ್ಲರ ಎದುರೇ ಅಶ್ಲೀಲ ವರ್ತನೆ: ಗಿಲ್ ಗೆ ಸಿಟ್ಟು ತರಿಸಿದ ಕ್ರಿಕೆಟಿಗ ಯಾರು ಗೊತ್ತಾ?