Webdunia - Bharat's app for daily news and videos

Install App

ಆಸ್ಟ್ರೇಲಿಯಾದ ಏಕದಿನ ಕ್ರಿಕೆಟ್ ತಂಡಕ್ಕೆ ವಿರಾಟ್ ಕೊಹ್ಲಿ ನಾಯಕ!

Webdunia
ಮಂಗಳವಾರ, 1 ಜನವರಿ 2019 (10:13 IST)
ಸಿಡ್ನಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಇದೀಗ ಆಸ್ಟ್ರೇಲಿಯಾ ಕ್ರಿಕೆಟ್ ನ ಏಕದಿನ ತಂಡಕ್ಕೆ ನಾಯಕರಾಗಿದ್ದಾರೆ! ಅದು ಹೇಗೆ ಅಂತೀರಾ?


ಇದು ನಿಜವಾದ ಕ್ರಿಕೆಟ್ ತಂಡವಲ್ಲ. ಕ್ರಿಕೆಟ್ ಆಸ್ಟ್ರೇಲಿಯಾ ಪ್ರಕಟಿಸಿರುವ 2018 ರ ವಿಶ್ವದ ಬೆಸ್ಟ್ ಏಕದಿನ ತಂಡಕ್ಕೆ ವಿರಾಟ್ ಕೊಹ್ಲಿ ನಾಯಕರಾಗಿ ಆಯ್ಕೆಯಾಗಿದ್ದಾರಷ್ಟೆ. ಈ ವರ್ಷ ಕೊಹ್ಲಿ 14 ಏಕದಿನ ಪಂದ್ಯವಾಡಿದ್ದು, 1200 ರನ್ ಗಳಿಸಿದ್ದಾರೆ. ಅದರಲ್ಲಿ ಆರು ಶತಕಗಳೂ ಸೇರಿವೆ.

2018 ಒಟ್ಟಾರೆಯಾಗಿ ಕೊಹ್ಲಿ ಯಶಸ್ವೀ ವರ್ಷವಾಗಿದ್ದು, ಅದೇ ಕಾರಣಕ್ಕೆ ಕ್ರಿಕೆಟ್ ಆಸ್ಟ್ರೇಲಿಯಾ ತನ್ನ ಕನಸಿನ ಏಕದಿನ ತಂಡಕ್ಕೆ ಕೊಹ್ಲಿಯನ್ನು ನಾಯಕನಾಗಿ ಆಯ್ಕೆ ಮಾಡಿದೆ. ಕೊಹ್ಲಿ ಅಲ್ಲದೆ, ಟೀಂ ಇಂಡಿಯಾ ಆಟಗಾರರಾದ ಜಸ್ಪ್ರೀತ್ ಬುಮ್ರಾ, ಕುಲದೀಪ್ ಯಾದವ್, ರೋಹಿತ್ ಶರ್ಮಾ ಕೂಡಾ ಈ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಈ ಕನಸಿನ ತಂಡದಲ್ಲಿ ಆಸ್ಟ್ರೇಲಿಯಾ, ದ.ಆಫ್ರಿಕಾ ಮತ್ತು ನ್ಯೂಜಿಲೆಂಡ್ ಹೊರತುಪಡಿಸಿ ಉಳಿದೆಲ್ಲಾ ರಾಷ್ಟ್ರಗಳ ಆಟಗಾರರು ಸ್ಥಾನ ಪಡೆದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಆಸ್ಟ್ರೇಲಿಯಾದ ವೇಗದ ಮಾಂತ್ರಿಕ ಮಿಚೆಲ್ ಸ್ಟಾರ್ಕ್‌ ಟಿ20 ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್‌ಬೈ

ರೋಹಿತ್ ಶರ್ಮಾ ಈಗ ಡುಮ್ಮ ಅಲ್ಲ, 20 ಕೆಜಿ ತೂಕ ಇಳಿಸಿದ್ದು ಹೇಗೆ ಗೊತ್ತಾ

ಟೀಂ ಇಂಡಿಯಾದಲ್ಲಿ ಒಬ್ಬೊಬ್ಬರಿಗೆ ಒಂದೊಂದು ಬಿರುದು ಕೊಟ್ಟ ಗೌತಮ್ ಗಂಭೀರ್

ರೋಹಿತ್ ಶರ್ಮಾ ಅಂದ್ರೆ ಸುಮ್ನೇನಾ, ಯೋ ಯೋ ಟೆಸ್ಟ್ ನಲ್ಲಿ ಎಷ್ಟು ಅಂಕ ನೋಡಿ

World Badminton: ಮೋಡಿ ಮಾಡಿದ ಸಾತ್ವಿಕ್‌–ಚಿರಾಗ್‌ ಜೋಡಿ: ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಚಾರಿತ್ರಿಕ ಸಾಧನೆ

ಮುಂದಿನ ಸುದ್ದಿ
Show comments