ವಿರಾಟ್ ಕೊಹ್ಲಿಯನ್ನು ಸೂಪರ್ ಸ್ಟಾರ್ ಎಂದವರು ಯಾರು ಗೊತ್ತೇ?!

ಭಾನುವಾರ, 4 ನವೆಂಬರ್ 2018 (09:22 IST)
ಮುಂಬೈ: ವಿರಾಟ್ ಕೊಹ್ಲಿ ಕ್ರಿಕೆಟ್ ನ ಸೂಪರ್ ಸ್ಟಾರ್ ಎಂದು ದ.ಆಫ್ರಿಕಾದ ಮಾಜಿ ನಾಯಕ ಗ್ರೇಮ್ ಸ್ಮಿತ್ ಹೊಗಳಿದ್ದಾರೆ.

‘ವಿಶ್ವ ಕ್ರಿಕೆಟ್ ನಲ್ಲಿ ಸೂಪರ್ ಸ್ಟಾರ್ ಕ್ರಿಕೆಟಿಗರ ಸಂಖ್ಯೆ ಕಡಿಮೆಯಾಗುತ್ತಿದೆ. ಬಹುಶಃ ಇಂಗ್ಲೆಂಡ್ ತಂಡದಲ್ಲಿ ಒಬ್ಬರೋ ಇಬ್ಬರೋ ಇರಬಹುದು. ಅದು ಬಿಟ್ಟರೆ ಕೊಹ್ಲಿ ಆಧುನಿಕ ಕ್ರಿಕೆಟ್ ನ ಸೂಪರ್ ಸ್ಟಾರ್’ ಎಂದು ಸ್ಮಿತ್ ಅಭಿಪ್ರಾಯಪಟ್ಟಿದ್ದಾರೆ.

ಕೊಹ್ಲಿಯಂತಹ ಸೂಪರ್ ಸ್ಟಾರ್ ಆಟಗಾರರಿಂದಲೇ ಇಂದು ಟೆಸ್ಟ್ ಕ್ರಿಕೆಟ್ ಉಳಿದುಕೊಂಡಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಕೊಹ್ಲಿ ಟೆಸ್ಟ್ ಕ್ರಿಕೆಟ್ ನ್ನು ಬಹುವಾಗಿ ಪ್ರೀತಿಸುತ್ತಾರೆ. ಈ ಮಾದರಿ ಕ್ರಿಕೆಟ್ ನಲ್ಲಿ ಅವರು ತೋರುತ್ತಿರುವ ಆಸಕ್ತಿ, ಪರಿಶ್ರಮ ಟೆಸ್ಟ್ ಕ್ರಿಕೆಟ್ ನ್ನು ಜೀವನಂತವಾಗಿಡುತ್ತದೆ ಎಂದು ಸ್ಮಿತ್ ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಕ್ರಿಕೆಟ್ ನ ಎಲ್ಲಾ ದಾಖಲೆಗಳೂ ಅಪಾಯದಲ್ಲಿವೆ ಎಂದು ಸುನಿಲ್ ಗವಾಸ್ಕರ್ ಹೇಳಿದ್ದೇಕೆ?