ಮಗಳು ವಮಿಕಾ ಜೊತೆ ಲಂಡನ್ ಕೆಫೆಯಲ್ಲಿ ವಿರಾಟ್ ಕೊಹ್ಲಿ ಫೋಟೋ ವೈರಲ್

Krishnaveni K
ಮಂಗಳವಾರ, 27 ಫೆಬ್ರವರಿ 2024 (10:42 IST)
Photo Courtesy: Twitter
ಲಂಡನ್: ಪತ್ನಿ ಅನುಷ್ಕಾ ಶರ್ಮಾ ಎರಡನೇ ಮಗುವಿಗೆ ಜನ್ಮ ನೀಡಿದ ಬಳಿಕ ಇದೇ ಮೊದಲ ಬಾರಿಗೆ ವಿರಾಟ್‍ ಕೊಹ್ಲಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ.

ಕೊಹ್ಲಿ ದಂಪತಿಗೆ ಇತ್ತೀಚೆಗೆ ತಮಗೆ ಗಂಡು ಮಗುವಾಗಿರುವ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿದ್ದರು. ಇದು ಅಭಿಮಾನಿಗಳಲ್ಲಿ ಭಾರೀ ಸಂಭ್ರಮ ಉಂಟು ಮಾಡಿತ್ತು. ಕೊಹ್ಲಿ ದಂಪತಿ ತಮ್ಮ ಮಗನಿಗೆ ಅಕಾಯ್ ಎಂದು ಹೆಸರಿಟ್ಟಿದ್ದರು. ಇದರ ಬೆನ್ನಲ್ಲೇ ಅಕಾಯ್ ನ ಎಐ ಜನರೇಟೆಡ್ ಚಿತ್ರಗಳು, ಸೋಷಿಯಲ್ ಮೀಡಿಯಾ ಖಾತೆಗಳೂ ಸೃಷ್ಟಿಯಾಗಿದ್ದವು.

ಸದ್ಯಕ್ಕೆ ಪತ್ನಿ, ಮಕ್ಕಳ ಜೊತೆ ಲಂಡನ್ ನಲ್ಲಿರುವ ವಿರಾಟ್ ಕೊಹ್ಲಿ ಕ್ರಿಕೆಟ್ ನಿಂದ ಸಂಪೂರ್ಣವಾಗಿ ದೂರವಿದ್ದಾರೆ. ಅಲ್ಲದೆ, ಹಲವು ದಿನಗಳಿಂದ ಸಾರ್ವಜನಿಕವಾಗಿ ಕೊಹ್ಲಿ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಆದರೆ ಎರಡನೇ ಮಗನ ಆಗಮನದ ಬಳಿಕ ಇದೇ ಮೊದಲ ಬಾರಿಗೆ ಕೊಹ್ಲಿ ಮತ್ತು ಪುತ್ರಿ ವಮಿಕಾ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಲಂಡನ್ ನ ಕೆಫೆಯೊಂದರಲ್ಲಿ ಮಗಳು ವಮಿಕಾ ಜೊತೆ ಕುಳಿತು ತಿಂಡಿ ಸವಿಯುತ್ತಿರುವ ಕೊಹ್ಲಿ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅನುಷ್ಕಾ ಜೊತೆಗಿರಲು ಕೊಹ್ಲಿ ಈಗ ಲಂಡನ್ ನಲ್ಲಿದ್ದಾರೆ. ಎರಡನೇ ಮಗುವಿನ ಆಗಮನದಿಂದಾಗಿ ಕೊಹ್ಲಿ ಜವಾಬ್ಧಾರಿ ಹೆಚ್ಚಾಗಿದ್ದು ಮಗಳನ್ನು ನೋಡಕೊಳ್ಳುವ ಸಂಪೂರ್ಣ ಹೊಣೆ ಅವರ ಹೆಗಲಿಗೇರಿದೆ. ಹೀಗಾಗಿ ಕಿಂಗ್ ಕೊಹ್ಲಿ ಕ್ರಿಕೆಟ್ ನಿಂದ ದೂರವಾಗಿ ಮಗಳನ್ನು ನೋಡಕೊಳ್ಳುವ ಬೇಬಿ ಸಿಟ್ಟರ್ ಆಗಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಸ್ಮೃತಿ ಮಂಧಾನ, ಪಾಲಾಶ್ ಮದುವೆ ನಡೆಯುತ್ತಾ: ಬಿಗ್ ಅಪ್ ಡೇಟ್ ಕೊಟ್ಟ ಪಾಲಾಶ್ ತಾಯಿ

ಗೆಳೆತನ ಅಂದ್ರೆ ಹೀಗಿರಬೇಕು: ಸ್ಮೃತಿ ಮಂಧಾನಗಾಗಿ ದೊಡ್ಡ ನಿರ್ಧಾರ ಕೈಗೊಂಡ ಜೆಮಿಮಾ ರೊಡ್ರಿಗಸ್

ಧೋನಿ ಮನೆಯಲ್ಲಿ ಪಾರ್ಟಿ, ಆದ್ರೆ ಎಲ್ಲರಿಗಿಲ್ಲ ಆಹ್ವಾನ: ಕೊಹ್ಲಿಗೆ ಧೋನಿಯಿಂದ ಸ್ಪೆಷಲ್ ಟ್ರೀಟ್ಮೆಂಟ್

IND vs SA: ದಕ್ಷಿಣ ಆಫ್ರಿಕಾ ವಿರುದ್ಧ ಟೀಂ ಇಂಡಿಯಾ ಏಕದಿನ ಯಾವಾಗ, ಎಲ್ಲಿ ಇಲ್ಲಿದೆ ವಿವರ

ಕ್ಯಾಪ್ಟನ್ ಜೊತೆ ಹೊಂದಾಣಿಕೆಯಾಗ್ತಿಲ್ಲ ಎಂದಾಕ್ಷಣ ಕೋಚ್ ಹುದ್ದೆ ಬಿಟ್ಟಿದ್ದ ಅನಿಲ್ ಕುಂಬ್ಳೆ: ಆದ್ರೆ ಗಂಭೀರ್...

ಮುಂದಿನ ಸುದ್ದಿ
Show comments