ಮುಂಬೈ: ಸುದೀರ್ಘ ಕ್ರಿಕೆಟ್ ಸರಣಿಗಾಗಿ ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಲ್ಲಿನ ಕ್ರಿಕೆಟ್ ಮಂಡಳಿಯ ಸುದ್ದಿಯೊಂದರಿಂದ ಖುಷಿಯಾಗಿದ್ದಾರೆ.
ಪ್ರತೀ ಬಾರಿ ಆಸ್ಟ್ರೇಲಿಯಾ ಸರಣಿಯಲ್ಲೂ ಆಟಕ್ಕಿಂತ ವಾಕ್ಸಮರವೇ ಹೆಚ್ಚು ಸದ್ದು ಮಾಡುತ್ತದೆ. ಆಸ್ಟ್ರೇಲಿಯಾ ಆಟಗಾರರು ಸ್ಲೆಡ್ಜಿಂಗ್ ಮಾಡುವುದರಲ್ಲಿ ಎತ್ತಿದ ಕೈ. ಆದರೆ ಈ ಬಾರಿ ಈ ರಗಳೆಗಳೆಲ್ಲಾ ಇರಲ್ಲ.
ಯಾಕೆಂದರೆ ಈ ಬಾರಿಯ ಸರಣಿಯಲ್ಲಿ ‘ನೋ ಸ್ಲೆಡ್ಜಿಂಗ್ ಪಾಲಿಸಿ’ ಅಳವಡಿಸಿಕೊಳ್ಳುತ್ತಿರುವುದಾಗಿ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಹೇಳಿದೆ. ಹೀಗಾಗಿ ಈ ಬಾರಿ ರಗಳೆಗಳಿಲ್ಲದೇ ಕೇವಲ ಕ್ರಿಕೆಟ್ ಕಡೆಗೆ ಗಮನಕೊಡಬಹುದು ಎಂದು ಕೊಹ್ಲಿ ಖುಷಿಯಾಗಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.