Select Your Language

Notifications

webdunia
webdunia
webdunia
webdunia

ವಿರಾಟ್ ಕೊಹ್ಲಿ ಬಗ್ಗೆ ಆಗಲೇ ಶುರುವಾಗಿದೆ ಕೀವೀಸ್, ಆಸ್ಟ್ರೇಲಿಯನ್ನರಿಗೆ ನಡುಕ!

ವಿರಾಟ್ ಕೊಹ್ಲಿ ಬಗ್ಗೆ ಆಗಲೇ ಶುರುವಾಗಿದೆ ಕೀವೀಸ್, ಆಸ್ಟ್ರೇಲಿಯನ್ನರಿಗೆ ನಡುಕ!
ಮುಂಬೈ , ಶುಕ್ರವಾರ, 16 ನವೆಂಬರ್ 2018 (09:00 IST)
ಮುಂಬೈ: ಆಸ್ಟ್ರೇಲಿಯಾ ಪ್ರವಾಸ ಮಾಡಲಿರುವ ಟೀಂ ಇಂಡಿಯಾ ಕ್ರಿಕೆಟಿಗರಲ್ಲಿ ನಾಯಕ ವಿರಾಟ್ ಕೊಹ್ಲಿ ಪ್ರಚಂಡ ಫಾರ್ಮ್ ಬಗ್ಗೆ ಅತಿಥೇಯ ತಂಡಕ್ಕೆ ಈಗಲೇ ಚಿಂತೆ ಶುರುವಾಗಿದೆ.

ಟೀಂ ಇಂಡಿಯಾದ ಬೇರೆ ಬ್ಯಾಟ್ಸ್ ಮನ್ ಗಳನ್ನು ಕಟ್ಟಿ ಹಾಕುವುದು ಸುಲಭ. ಆದರೆ ಕೊಹ್ಲಿ ಇಂಗ್ಲೆಂಡ್ ನಲ್ಲೂ ಸೈ ಎನಿಸಿಕೊಂಡಿರುವುದರಿಂದ ಪ್ರಚಂಡ ಫಾರ್ಮ್ ನಲ್ಲಿರುವ ಅವರನ್ನು ನಿಯಂತ್ರಿಸುವ ಬಗೆ ಬಗ್ಗೆ ಈಗಾಗಲೇ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ತಲೆ ಕೆಡಿಸಿಕೊಂಡಿದೆ. ಜನವರಿಯಲ್ಲಿ ಭಾರತ ನ್ಯೂಜಿಲೆಂಡ್ ವಿರುದ್ಧ ಏಕದಿನ ಮತ್ತು ಟಿ20 ಸರಣಿ ಆಡಲಿದೆ.

ಟೀಂ ಇಂಡಿಯಾವನ್ನು ಸೋಲಿಸಬೇಕೆಂದರೆ ವಿರಾಟ್ ಕೊಹ್ಲಿಗೆ ಅಂಕುಶ ಹಾಕಬೇಕು. ಮೊದಲ 10-15 ಬಾಲ್ ಒಳಗೇ ಕೊಹ್ಲಿಯನ್ನು ಔಟ್ ಮಾಡಬೇಕು. ಹಾಗಿದ್ದರೇ ಭಾರತದ ಎದುರು ಮೇಲುಗೈ ಸಾಧಿಸಲು ಸಾಧ್ಯ ಎಂದು ಕೀವೀಸ್ ಮಾಜಿ ಕೋಚ್ ಮೈಕ್ ಹಸನ್ ಅಭಿಪ್ರಾಯಪಟ್ಟಿದ್ದಾರೆ.

ಅತ್ತ ಆಸ್ಟ್ರೇಲಿಯಾ ಮಾಜಿ ನಾಯಕ ಸ್ಟೀವ್ ವಾ ಕೂಡಾ ವಿರಾಟ್ ಕೊಹ್ಲಿ ಎಂದರೆ ತೆಂಡುಲ್ಕರ್, ಬ್ರಿಯಾನ್ ಲಾರಾ ಇದ್ದಂತೆ. ಇಂತಹ ಕ್ರಿಕೆಟಿಗರು ಆಸ್ಟ್ರೇಲಿಯಾದಂತಹ ಮಹತ್ವದ ಸರಣಿಗಳಲ್ಲಿ ತಮ್ಮ ಸಾಮರ್ಥ್ಯ ತೋರಿಸಲು ಕಾದಿರುತ್ತಾರೆ. ಅಂತಹ ಅವಕಾಶಗಳನ್ನು ಅವರು ಮಿಸ್ ಮಾಡಿಕೊಳ್ಳಲ್ಲ ಎಂದು ತಮ್ಮ ತಂಡಕ್ಕೆ ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್: ಕೊಟ್ಟ ಹಣಕ್ಕೆ ತಕ್ಕ ಆಡದ ಕನ್ನಡಿಗ ಮನೀಶ್ ಪಾಂಡೆ ಹೈದರಾಬಾದ್ ನಿಂದ ಕೊಕ್?!