Select Your Language

Notifications

webdunia
webdunia
webdunia
webdunia

ಟೀಂ ಇಂಡಿಯಾ ಏಕದಿನ ಪಂದ್ಯದ ವಿಡಿಯೋ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿ ಸಂಕಷ್ಟಕ್ಕೆ ಸಿಲುಕಿದ ಅಭಿಮಾನಿ

ಟೀಂ ಇಂಡಿಯಾ ಏಕದಿನ ಪಂದ್ಯದ ವಿಡಿಯೋ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿ ಸಂಕಷ್ಟಕ್ಕೆ ಸಿಲುಕಿದ ಅಭಿಮಾನಿ
ಮುಂಬೈ , ಗುರುವಾರ, 15 ನವೆಂಬರ್ 2018 (09:21 IST)
ಮುಂಬೈ: ಟೀಂ ಇಂಡಿಯಾ ಮತ್ತು ಶ್ರೀಲಂಕಾ ನಡುವೆ 2017 ರ ಡಿಸೆಂಬರ್ ನಲ್ಲಿ ಮೊಹಾಲಿಯಲ್ಲಿ ನಡೆದ ಪಂದ್ಯವೊಂದರ ವಿಡಿಯೋ ಪ್ರಕಟಿಸಿ ಅಭಿಮಾನಿ ಮಹಿಳೆಯೊಬ್ಬರು ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಪಂದ್ಯಕ್ಕೆ ಹಾಜರಾಗಿದ್ದ ಚಂಡೀಘಡ ಮೂಲದ ಮೋನಿಕಾ ಶೈಲ್ ಎಂಬ ಮಹಿಳೆ ತಾನು ಫ್ಲೈಯಿಂಗ್ ಕಿಸ್ ಮಾಡುವ ದೃಶ್ಯದ ಟಿವಿ ವಿಡಿಯೋ ತುಣುಕನ್ನು ತನ್ನ ಫೇಸ್ ಬುಕ್ ಪೇಜ್ ನಲ್ಲಿ ಪ್ರಕಟಿಸಿದ್ದರು.

ಆದರೆ ಭಾರತ ಆಡುವ ಪಂದ್ಯಗಳ ವಿಡಿಯೋ ಹಕ್ಕು ಸ್ವಾಮ್ಯಪಡೆದಿರುವ ಸಂಸ್ಥೆಯ ಒಪ್ಪಿಗೆ ಇಲ್ಲದೇ ಯಾರೂ ಪ್ರಕಟಿಸುವಂತಿಲ್ಲ. ಆದರೆ ಮಹಿಳಾ ಅಭಿಮಾನಿ ಪ್ರಕಟಿಸಿದ್ದಕ್ಕೆ ಇದೀಗ ಆಕೆಯ ವಿರುದ್ಧ ಹಕ್ಕು ಸ್ವಾಮ್ಯ ಉಲ್ಲಂಘಿಸಿದ ಪ್ರಕರಣ ದಾಖಲಾಗಿದೆ. ಅಲ್ಲದೆ, ಆಕೆಯ ಫೇಸ್ ಬುಕ್ ಖಾತೆಯನ್ನೂ ಫೇಸ್ ಬುಕ್ ಸಂಸ್ಥೆ ರದ್ದುಗೊಳಿಸಿದೆ.

ಇದೀಗ ಮೋನಿಕಾ ಶೈಲ್ ಬಿಸಿಸಿಐಗೆ ಕ್ಷಮೆ ಕೋರಿ ಪತ್ರ ಬರೆದಿದ್ದು, ತಾನು ಫೇಸ್ ಬುಕ್ ಮೂಲಕ ವ್ಯವಹಾರ ಮಾಡುತ್ತಿದ್ದು, ಫೇಸ್ ಬುಕ್ ಖಾತೆ ರದ್ದಾಗಿರುವುದರಿಂದ ನನ್ನ ವೃತ್ತಿಗೆ ತೊಂದರೆಯಾಗಿದೆ ಎಂದು ಮನವಿ ಮಾಡಿದ್ದಾರೆ. ಆದರೆ ಪ್ರಕರಣ ಕೋರ್ಟ್ ಮೆಟ್ಟಿಲೇರಿರುವುದರಿಂದ ಬಿಸಿಸಿಐ ಇದೀಗ ಕೋರ್ಟ್ ಮುಖಾಂತರವೇ ಉತ್ತರಿಸಬೇಕಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಟೀಂ ಇಂಡಿಯಾದೊಳಗೆ ಕ್ರಿಕೆಟಿಗರಿಗೆ ಈ ಮೂವರೇ ಅಣ್ಣಂದಿರು!