Select Your Language

Notifications

webdunia
webdunia
webdunia
webdunia

ಖಾಸಗಿ ಬದುಕನ್ನು ತೋರಿಸಿಕೊಳ್ಳೋದು ವಿರಾಟ್ ಕೊಹ್ಲಿಗೆ ಇಷ್ಟವೇ ಇಲ್ಲವಂತೆ!

ಖಾಸಗಿ ಬದುಕನ್ನು ತೋರಿಸಿಕೊಳ್ಳೋದು ವಿರಾಟ್ ಕೊಹ್ಲಿಗೆ ಇಷ್ಟವೇ ಇಲ್ಲವಂತೆ!
ಮುಂಬೈ , ಶನಿವಾರ, 12 ಮೇ 2018 (07:11 IST)
ಮುಂಬೈ: ಎಷ್ಟೇ ದೊಡ್ಡ ಸೆಲೆಬ್ರಿಟಿಯಾದರೂ ನಾವೂ ಮನುಷ್ಯರೇ. ನಮ್ಮ ಖಾಸಗಿ ಬದುಕು ಸಾರ್ವಜನಿಕ ಚರ್ಚಾ ವಸ್ತುವಾಗುವುದು ಕಿರಿ ಕಿರಿ ಉಂಟು ಮಾಡುತ್ತದೆ ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿಕೊಂಡಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಕೊಹ್ಲಿ ‘ವೈಯಕ್ತಿಕ ಬದುಕು ಸಾರ್ವಜನಿಕವಾಗುವುದು ನನಗೆ ಇಷ್ಟವಿಲ್ಲ. ಹಾಗಿದ್ದರೂ ನಮ್ಮ ವೈಯಕ್ತಿಕ ಬದುಕಿನ ವಿಚಾರಗಳು ಪಬ್ಲಿಕ್ ಆದರೆ ಅದನ್ನು ಹೇಗೆ ನಿಭಾಯಿಸಬೇಕೆಂದು ಕಲಿತಿದ್ದೇನೆ’ ಎಂದು ಕೊಹ್ಲಿ ಹೇಳಿದ್ದಾರೆ.

ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ಖಾಸಗಿ ಬದುಕಿನ ಕ್ಷಣಗಳನ್ನು ಮಾಧ್ಯಮಗಳು ಒಂದೂ ಬಿಡದಂತೆ ಪ್ರಸಾರ ಮಾಡುತ್ತವೆ. ಹೀಗಾಗಿ ಕೊಹ್ಲಿ ದೂರದ ಇಟೆಲಿಯಲ್ಲಿ ಮದುವೆಯಾಗಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಧೋನಿ ಟೀಂನಲ್ಲಿ ಯಾರೂ ಸುಮ್ಮನೇ ಕೂರುವಂತಿಲ್ಲ!