Select Your Language

Notifications

webdunia
webdunia
webdunia
webdunia

ಧೋನಿಯೊಳಗಿನ ನಾಯಕತ್ವದ ಸಾಮರ್ಥ್ಯವನ್ನು ಸಚಿನ್ ಪತ್ತೆ ಹಚ್ಚಿದ್ದು ಹೇಗೆ ಗೊತ್ತಾ?!

ಧೋನಿಯೊಳಗಿನ ನಾಯಕತ್ವದ ಸಾಮರ್ಥ್ಯವನ್ನು ಸಚಿನ್ ಪತ್ತೆ ಹಚ್ಚಿದ್ದು ಹೇಗೆ ಗೊತ್ತಾ?!
ಮುಂಬೈ , ಶುಕ್ರವಾರ, 11 ಮೇ 2018 (09:28 IST)
ಮುಂಬೈ: ಭಾರತ ಕ್ರಿಕೆಟ್ ಕಂಡ ಶ್ರೇಷ್ಠ ನಾಯಕ ಯಾರು ಎಂಬ ಪ್ರಶ್ನೆ ಕೇಳಿದರೆ ಎಲ್ಲರೂ ಮೊದಲು ಹೇಳುವುದು ಧೋನಿ ಹೆಸರನ್ನು. ಆದರೆ ಧೋನಿ ನಾಯಕನಾಗಿ ಆಯ್ಕೆಯಾಗಲು ಪ್ರಮುಖ ಕಾರಣ ಸಚಿನ್ ತೆಂಡುಲ್ಕರ್.

ಟಿ20 ವಿಶ್ವಕಪ್ ಗೆ ಧೋನಿ ಹೆಸರನ್ನು ನಾಯಕತ್ವಕ್ಕೆ ಸೂಚಿಸಿದ್ದು ಸಚಿನ್ ತೆಂಡುಲ್ಕರ್ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಧೋನಿಯಲ್ಲಿ ನಾಯಕತ್ವದ ಗುಣವಿದೆ ಎಂದು ಸಚಿನ್ ಗೆ ಅರಿವಾಗಿದ್ದು ಹೇಗೆ ಗೊತ್ತಾ?

ಬ್ರೇಕ್ ಫಾಸ್ಟ್ ವಿತ್ ಚಾಂಪಿಯನ್ಸ್ ಎಂಬ ಸಂದರ್ಶನ ಕಾರ್ಯಕ್ರಮದಲ್ಲಿ ಸಚಿನ್ ಈ ರಹಸ್ಯ ಬಹಿರಂಗಪಡಿಸಿದ್ದಾರೆ. ‘ನಾವಿಬ್ಬರೂ ಜತೆಯಾಗಿ ಆಡುತ್ತಿದ್ದಾಗ ನಾನು ಸ್ಲಿಪ್ ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದೆ. ಧೋನಿ ವಿಕಟ್ ಕೀಪರ್ ಆಗಿರುತ್ತಿದ್ದರು.

ಈ ಸಂದರ್ಭದಲ್ಲಿ ನಾನು ಫೀಲ್ಡಿಂಗ್ ಸೆಟ್ ಮಾಡುವ ಬಗ್ಗೆ ಧೋನಿ ಜತೆ ಚರ್ಚೆ ನಡೆಸುತ್ತಿದ್ದೆ. ನಾನು ನನ್ನ ಅಭಿಪ್ರಾಯ ಹೇಳಿದರೆ, ಧೋನಿ ಅವರದ್ದೇ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದರು. ಈ ವೇಳೆಯೇ ಅವರಲ್ಲಿ ನಾಯಕತ್ವದ ಗುಣ ಗಮನಿಸಿದೆ’ ಎಂದು ಸಚಿನ್ ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ವಿರಾಟ್ ಕೊಹ್ಲಿ ಶ್ರೇಷ್ಠ ಕ್ರಿಕೆಟಿಗನಾಗಿರುವುದರ ಗುಟ್ಟೇನು ಗೊತ್ತಾ?