ಎರಡು ಬಾರಿ ಸೊನ್ನೆ ಸುತ್ತಿದ ವಿರಾಟ್ ಕೊಹ್ಲಿ ಮಾಡಿದ್ದೇನು

Krishnaveni K
ಶುಕ್ರವಾರ, 24 ಅಕ್ಟೋಬರ್ 2025 (09:53 IST)
ಅಡಿಲೇಡ್: ಭಾರತ ಮತ್ತು ಆಸ್ಟ್ರೇಲಿಯಾ ಏಕದಿನ ಸರಣಿಯಲ್ಲಿ ಎರಡೂ ಪಂದ್ಯಗಳಲ್ಲಿ ಸೊನ್ನೆ ಸುತ್ತಿದ ಬಳಿಕ ವಿರಾಟ್ ಕೊಹ್ಲಿ ಮಾಡಿದ್ದೇನು ಗೊತ್ತಾ?

ಪರ್ತ್ ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಶೂನ್ಯಕ್ಕೆ ಔಟಾದಾಗ ಪರವಾಗಿಲ್ಲ ಮುಂದಿನ ಪಂದ್ಯಕ್ಕೆ ಖಂಡಿತಾ ಸೆಂಚುರಿ ಹೊಡೀತಾರೆ ಎಂದು ಅಭಿಮಾನಿಗಳು ನಿರೀಕ್ಷೆಯಿಟ್ಟುಕೊಂಡಿದ್ದರು. ಆದರೆ ಎರಡನೇ ಪಂದ್ಯದಲ್ಲೂ ಅದೇ ಕತೆ.

ಎರಡನೇ ಪಂದ್ಯದಲ್ಲಿ ಶೂನ್ಯ ಸುತ್ತಿದಾಗ ಸ್ವತಃ ಕೊಹ್ಲಿಯಲ್ಲೇ ಒಂದು ರೀತಿಯ ಬೇಸರ ಕಾಡಿತ್ತು. ಆದರೂ ತಮಗೆ ಎದ್ದು ನಿಂತು ಗೌರವ ಸಲ್ಲಿಸಿದ ಅಭಿಮಾನಿಗಳತ್ತ ಧನ್ಯವಾದ ಸಲ್ಲಿಸಿದ್ದಾರೆ. ಇದರಿಂದ ಅವರು ನಿವೃತ್ತರಾಗಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು.

ಆದರೆ ಇಷ್ಟಕ್ಕೇ ಕೊಹ್ಲಿ ಸುಮ್ಮನಾಗಲಿಲ್ಲ. ಎರಡನೇ ಪಂದ್ಯದಲ್ಲಿ ಶೂನ್ಯ ಸುತ್ತಿದ ಬಳಿಕ ಕೊಹ್ಲಿ ನೇರವಾಗಿ ಅಭ್ಯಾಸ ನಡೆಸಲು ನೆಟ್ಸ್ ಗೆ ಹೋಗಿದ್ದಾರೆ. ಮೂರನೇ ಪಂದ್ಯದಲ್ಲಾದರೂ ಅಭಿಮಾನಿಗಳ ನಿರೀಕ್ಷೆಗೆ ತಕ್ಕ ಪ್ರದರ್ಶನ ನೀಡಲು ಕೊಹ್ಲಿ ಕಠಿಣ ಅಭ್ಯಾಸ ನಡೆಸಿದ್ದಾರೆ. ಅವರ ಪ್ರಯತ್ನಕ್ಕೆ ಫಲ ಸಿಗಲಿ ಎಂಬುದೇ ಅಭಿಮಾನಿಗಳ ಹಾರೈಕೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಅಯ್ಯೋ.. ರೋಹಿತ್ ಶರ್ಮಾ ಈ ಜಾಗಕ್ಕೇ ಬ್ಯಾಟ್ ಇಡುವ ಧೈರ್ಯ ಕೊಹ್ಲಿಗೆ ಮಾತ್ರ ಎಂದ ಫ್ಯಾನ್ಸ್

ರೋಹಿತ್ ಶರ್ಮಾ ಶತಕ: ನಮ್ದು ಇನ್ನೂ ಕತೆ ಮುಗಿದಿಲ್ಲ ಈಗ ಶುರು ಎಂದ ಹಿಟ್ ಮ್ಯಾನ್

Funny video: ಸಿಂಗಲ್ಸ್ ತೆಗೆದಿದ್ದಕ್ಕೆ ವಿರಾಟ್ ಕೊಹ್ಲಿ ಈ ಪಾಟಿ ಸಂಭ್ರಮ

IND vs AUS: ನಾಲ್ಕು ವಿಕೆಟ್ ಕಿತ್ತು ಗಂಭೀರ್ ಮರ್ಯಾದೆ ಕಾಪಾಡಿದ ಹರ್ಷಿತ್ ರಾಣಾ

IND vs AUS: ಅದ್ಭುತ ಕ್ಯಾಚ್ ಹಿಡಿದ ಶ್ರೇಯಸ್ ಅಯ್ಯರ್ ಆದ್ರೆ ಆಮೇಲೇನಾಯ್ತು video

ಮುಂದಿನ ಸುದ್ದಿ
Show comments