INDW vs NZW: ಅಂತೂ ಇಂತೂ ವಿಶ್ವಕಪ್ ಸೆಮಿಫೈನಲ್ ಗೆ ಲಗ್ಗೆಯಿಟ್ಟ ಭಾರತ ವನಿತೆಯರು

Krishnaveni K
ಶುಕ್ರವಾರ, 24 ಅಕ್ಟೋಬರ್ 2025 (08:34 IST)
Photo Credit: BCCI
ಮುಂಬೈ: ಅಂತೂ ಇಂತೂ ಭಾರತ ಮಹಿಳಾ ಕ್ರಿಕೆಟ್ ತಂಡ ಏಕದಿನ ವಿಶ್ವಕಪ್ ಸೆಮಿಫೈನಲ್ ಗೆ ಲಗ್ಗೆಯಿಟ್ಟಿದೆ. ನ್ಯೂಜಿಲೆಂಡ್ ವಿರುದ್ಧ ಡಕ್ ವರ್ತ್ ಲೂಯಿಸ್ ನಿಯಮದ ಪ್ರಕಾರ 53 ರನ್ ಗಳ ಗೆಲುವು ಸಾಧಿಸಿದ ಮಹಿಳೆಯರು ಇನ್ನೂ ಒಂದು ಲೀಗ್ ಪಂದ್ಯ ಬಾಕಿ ಇರುವಂತೆಯೇ ಸೆಮಿಫೈನಲ್ ಗೇರಿದೆ.

ನಿನ್ನೆಯ ಪಂದ್ಯ ಭಾರತದ ಪಾಲಿಗೆ ನಿರ್ಣಾಯಕವಾಗಿತ್ತು. ನಿನ್ನೆ ಸೋತಿದ್ದರೆ ಟೂರ್ನಿಯಿಂದಲೇ ಹೊರಬೀಳಬೇಕಾಗಿತ್ತು. ಆದರೆ ಈಗ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಭದ್ರಪಡಿಸಿಕೊಂಡು ಸೆಮಿಫೈನಲ್ ಗೆ ಅರ್ಹತೆ ಪಡೆದಿದೆ.

ನಿನ್ನೆಯ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ಸ್ಮೃತಿ ಮಂಧಾನ, ಪ್ರತೀಕಾ ರಾವಲ್ ಶತಕದ ನೆರವಿನಿಂದ 49 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 340 ರನ್ ಗಳ ಬೃಹತ್ ಮೊತ್ತ ಗಳಿಸಿತ್ತು. ಇದನ್ನು ಬೆನ್ನತ್ತಿದ ನ್ಯೂಜಿಲೆಂಡ್ 44 ಓವರ್ ಗಳಲ್ಲಿ 271 ರನ್ ಗಳಿಸಲಷ್ಟೇ ಶಕ್ತವಾಯಿತು. ಮಳೆಯಿಂದಾಗಿ ಅಡಚಣೆಗೊಂಡಿದ್ದ ಪಂದ್ಯವನ್ನು 44 ಓವರ್ ಗಳಿಗೆ ಸೀಮಿತಗೊಳಿಸಲಾಗಿತ್ತು.

ಇದೀಗ ಭಾರತಕ್ಕೆ ಸೆಮಿಫೈನಲ್ ನಲ್ಲಿ ದಕ್ಷಿಣ ಆಫ್ರಿಕಾ ಅಥವಾ ಆಸ್ಟ್ರೇಲಿಯಾ ಎದುರಾಳಿಯಾಗಿರಲಿದೆ. ವಿಶ್ವಕಪ್ ಗೆಲ್ಲಲು ಇನ್ನು ಎರಡೇ ಪಂದ್ಯಗಳನ್ನು ಗೆದ್ದರೆ ಸಾಕು. ಆದರೆ ಈ ಹಾದಿ ಕಠಿಣವಾಗಿದ್ದು ಪ್ರಬಲ ತಂಡಗಳನ್ನೇ ಸೋಲಿಸಬೇಕಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

INDW vs NZW: ಅಂತೂ ಇಂತೂ ವಿಶ್ವಕಪ್ ಸೆಮಿಫೈನಲ್ ಗೆ ಲಗ್ಗೆಯಿಟ್ಟ ಭಾರತ ವನಿತೆಯರು

Rohit Sharma: ಅಯ್ಯೋ.. ನಾನೇ ಕಟ್ಟಿದ ಕೋಟೆ ನನ್ನೆದುರಲ್ಲೇ ಒಡೆದೇ ಹೋಯ್ತಲ್ಲಾ

INDW vs NZW: ಒಂದೇ ದಿನ ಕಿಂಗ್ ಕೊಹ್ಲಿ ಶೂನ್ಯ, ಕ್ವೀನ್ ಸ್ಮೃತಿ ಮಂಧಾನ ಸೆಂಚುರಿ

ಮತ್ತೇ ಕೈಕೊಟ್ಟ ವಿರಾಟ್ ಕೊಹ್ಲಿ, ಕಾಂಗರೂ ನೆಲದಲ್ಲಿ ಟೀಂ ಇಂಡಿಯಾಗೆ ಸೋಲು

Viral Video: ರೋಹಿತ್, ಧೋನಿ ನೆನಪಿಸುವಂತೆ ಬ್ಯಾಟಿಂಗ್ ಮಾಡುತ್ತಾನೆ ಈ ಪುಟ್ಟ ಬಾಲಕ

ಮುಂದಿನ ಸುದ್ದಿ
Show comments