ಅಡಿಲೇಡ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಮತ್ತು ಶ್ರೇಯಸ್ ಅಯ್ಯರ್ ನಡುವೆ ನಡೆದ ಸ್ವಾರಸ್ಯಕರ ಮಾತುಕತೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಈ ಪಂದ್ಯದಲ್ಲಿ ಭಾರತ ಸಂಕಷ್ಟದಲ್ಲಿದ್ದಾಗ ಇಬ್ಬರೂ ಉತ್ತಮ ಜೊತೆಯಾಟವಾಡಿ ಭಾರತಕ್ಕೆ ಗೌರವಯುತ ಮೊತ್ತ ಕಲೆ ಹಾಕಲು ನೆರವಾಗಿದ್ದರು. ಸಂಕಷ್ಟದ ಸಮಯದಲ್ಲಿ ಇಬ್ಬರೂ ಶತಕದ ಜೊತೆಯಾಟವಾಡಿದ್ದಾರೆ. ರೋಹಿತ್ 73 ರನ್ ಗಳಿಸಿದರೆ ಶ್ರೇಯಸ್ ಅಯ್ಯರ್ 61 ರನ್ ಗಳಿಸಿದರು.
ಒಂದು ಹಂತದಲ್ಲಿ ರೋಹಿತ್ ಶರ್ಮಾ ಬಾಲ್ ಹೊಡೆದು ಒಂಟಿ ರನ್ ಕದಿಯಲು ಮುಂದಾದರು. ಆದರೆ ಶ್ರೇಯಸ್ ಅಯ್ಯರ್ ಹಿಂದೇಟು ಹಾಕಿದರು. ಆಗ ರೋಹಿತ್ ಅರೇ ಶ್ರೇಯಸ್ ರನ್ ಆಗಿ ಹೋಗುತ್ತಿತ್ತು ಎನ್ನುತ್ತಾರೆ. ಅದಕ್ಕೆ ಶ್ರೇಯಸ್ ನೀವು ಮಾಡಿ ತೋರಿಸಿ, ಏನಾದರೂ ಆದರೆ ನನಗೆ ಹೇಳಬೇಡಿ ಮತ್ತೆ ಎನ್ನುತ್ತಾರೆ. ಅದಕ್ಕೆ ರೋಹಿತ್ ನೀನು ಮುಂದೆ ಬರಬೇಕು. ಏಳು ಓವರ್ ಆಗಿದೆ, ಬೌಲರ್ ಸುಸ್ತಾಗಿದ್ದಾನೆ, ಓಡಬಹುದಿತ್ತು ಎನ್ನುತ್ತಾರೆ. ಇಬ್ಬರ ಸಂಭಾಷಣೆಯ ವಿಡಿಯೋ ಇಲ್ಲಿದೆ ನೋಡಿ.
The stump mic convo between Rohit Sharma and Shreyas Iyer. ???? pic.twitter.com/oIQa6HaXBM
— Mufaddal Vohra (@mufaddal_vohra) October 23, 2025