Select Your Language

Notifications

webdunia
webdunia
webdunia
webdunia

ಎರಡು ಬಾರಿ ಸೊನ್ನೆ ಸುತ್ತಿದ ವಿರಾಟ್ ಕೊಹ್ಲಿ ಮಾಡಿದ್ದೇನು

Virat Kohli

Krishnaveni K

ಅಡಿಲೇಡ್ , ಶುಕ್ರವಾರ, 24 ಅಕ್ಟೋಬರ್ 2025 (09:53 IST)
ಅಡಿಲೇಡ್: ಭಾರತ ಮತ್ತು ಆಸ್ಟ್ರೇಲಿಯಾ ಏಕದಿನ ಸರಣಿಯಲ್ಲಿ ಎರಡೂ ಪಂದ್ಯಗಳಲ್ಲಿ ಸೊನ್ನೆ ಸುತ್ತಿದ ಬಳಿಕ ವಿರಾಟ್ ಕೊಹ್ಲಿ ಮಾಡಿದ್ದೇನು ಗೊತ್ತಾ?

ಪರ್ತ್ ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಶೂನ್ಯಕ್ಕೆ ಔಟಾದಾಗ ಪರವಾಗಿಲ್ಲ ಮುಂದಿನ ಪಂದ್ಯಕ್ಕೆ ಖಂಡಿತಾ ಸೆಂಚುರಿ ಹೊಡೀತಾರೆ ಎಂದು ಅಭಿಮಾನಿಗಳು ನಿರೀಕ್ಷೆಯಿಟ್ಟುಕೊಂಡಿದ್ದರು. ಆದರೆ ಎರಡನೇ ಪಂದ್ಯದಲ್ಲೂ ಅದೇ ಕತೆ.

ಎರಡನೇ ಪಂದ್ಯದಲ್ಲಿ ಶೂನ್ಯ ಸುತ್ತಿದಾಗ ಸ್ವತಃ ಕೊಹ್ಲಿಯಲ್ಲೇ ಒಂದು ರೀತಿಯ ಬೇಸರ ಕಾಡಿತ್ತು. ಆದರೂ ತಮಗೆ ಎದ್ದು ನಿಂತು ಗೌರವ ಸಲ್ಲಿಸಿದ ಅಭಿಮಾನಿಗಳತ್ತ ಧನ್ಯವಾದ ಸಲ್ಲಿಸಿದ್ದಾರೆ. ಇದರಿಂದ ಅವರು ನಿವೃತ್ತರಾಗಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು.

ಆದರೆ ಇಷ್ಟಕ್ಕೇ ಕೊಹ್ಲಿ ಸುಮ್ಮನಾಗಲಿಲ್ಲ. ಎರಡನೇ ಪಂದ್ಯದಲ್ಲಿ ಶೂನ್ಯ ಸುತ್ತಿದ ಬಳಿಕ ಕೊಹ್ಲಿ ನೇರವಾಗಿ ಅಭ್ಯಾಸ ನಡೆಸಲು ನೆಟ್ಸ್ ಗೆ ಹೋಗಿದ್ದಾರೆ. ಮೂರನೇ ಪಂದ್ಯದಲ್ಲಾದರೂ ಅಭಿಮಾನಿಗಳ ನಿರೀಕ್ಷೆಗೆ ತಕ್ಕ ಪ್ರದರ್ಶನ ನೀಡಲು ಕೊಹ್ಲಿ ಕಠಿಣ ಅಭ್ಯಾಸ ನಡೆಸಿದ್ದಾರೆ. ಅವರ ಪ್ರಯತ್ನಕ್ಕೆ ಫಲ ಸಿಗಲಿ ಎಂಬುದೇ ಅಭಿಮಾನಿಗಳ ಹಾರೈಕೆ.

Share this Story:

Follow Webdunia kannada

ಮುಂದಿನ ಸುದ್ದಿ

INDW vs NZW: ಅಂತೂ ಇಂತೂ ವಿಶ್ವಕಪ್ ಸೆಮಿಫೈನಲ್ ಗೆ ಲಗ್ಗೆಯಿಟ್ಟ ಭಾರತ ವನಿತೆಯರು