Select Your Language

Notifications

webdunia
webdunia
webdunia
webdunia

80 ಎಸೆತಗಳ ನಂತರ ಬೌಂಡರಿ: ಸಂಭ್ರಮಿಸಿದ ವಿರಾಟ್ ಕೊಹ್ಲಿ!

80 ಎಸೆತಗಳ ನಂತರ ಬೌಂಡರಿ: ಸಂಭ್ರಮಿಸಿದ ವಿರಾಟ್ ಕೊಹ್ಲಿ!
ಡೊಮಿನಿಕಾ , ಶುಕ್ರವಾರ, 14 ಜುಲೈ 2023 (09:23 IST)
Photo Courtesy: Twitter
ಡೊಮಿನಿಕಾ: ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ದ್ವಿತೀಯ ದಿನ ಟೀಂ ಇಂಡಿಯಾ ಬ್ಯಾಟಿಗ ವಿರಾಟ್ ಕೊಹ್ಲಿ 36 ರನ್ ಗಳಿಸಿ ಇಂದಿಗೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

96 ಎಸೆತ ಎದುರಿಸಿದ ವಿರಾಟ್ ಕೊಹ್ಲಿ 36 ರನ್ ಗಳಿಸಿದ್ದಾರೆ. ಸಾಮಾನ್ಯವಾಗಿ ಕೊಹ್ಲಿ ಇಷ್ಟು ನಿಧಾನಗತಿಯಲ್ಲಿ ಆಡುವುದಿಲ್ಲ. ಆದರೆ ನಿನ್ನೆ ಎಚ್ಚರಿಕೆಯ ಆಟವಾಡಿ ಯಶಸ್ವಿ ಜೈಸ್ವಾಲ್ ಗೆ ತಕ್ಕ ಸಾಥ್ ನೀಡಿದ್ದಾರೆ. ಈ ವೇಳೆ ಅವರು ಬಾರಿಸಿದ್ದು ಕೇವಲ ಒಂದು ಬೌಂಡರಿ ಮಾತ್ರ.

ಅದೂ 80 ಎಸೆತಗಳ ನಂತರ ಕೊಹ್ಲಿ ಒಂದು ಬೌಂಡರಿ ಗಳಿಸಿದ್ದಾರೆ. ಹೀಗಾಗಿ ಸಹಜವಾಗಿಯೇ ಕೊಹ್ಲಿ ಮೊದಲ ಬೌಂಡರಿಯನ್ನು ಯುವ ಆಟಗಾರನಂತೆ ಸಂಭ್ರಮಿಸಿದ್ದಾರೆ. ಕಳೆದ ಬಾರಿ ಆಸ್ಟ್ರೇಲಿಯಾ ವಿರುದ್ಧವೂ ಕೊಹ್ಲಿ ನಿಧಾನಗತಿಯಲ್ಲಿ ರನ್ ಗಳಿಸಿ ಶತಕ ಸಿಡಿಸಿದ್ದರು. ಇಂದು ಕೊಹ್ಲಿ ಶತಕ ಗಳಿಸಬಹುದು ಎಂಬ ನಿರೀಕ್ಷೆಯಲ್ಲಿ ಅವರ ಅಭಿಮಾನಿಗಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಿನ್ನೆ ರೋಹಿತ್ ಜೊತೆ ಇಂದು ಕೊಹ್ಲಿ ಜೊತೆ ಯಶಸ್ವಿ ಬ್ಯಾಟಿಂಗ್ ಶೋ?