Select Your Language

Notifications

webdunia
webdunia
webdunia
Sunday, 6 April 2025
webdunia

ಹಿಟ್ ಮ್ಯಾನ್ ರೋಹಿತ್, ಯಂಗ್ ಮ್ಯಾನ್ ಜೈಸ್ವಾಲ್ ಅರ್ಧಶತಕ

ಟೀಂ ಇಂಡಿಯಾ
ಡೊಮಿನಿಕಾ , ಗುರುವಾರ, 13 ಜುಲೈ 2023 (20:58 IST)
ಡೊಮಿನಿಕಾ: ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ದ್ವಿತೀಯ ದಿನದಲ್ಲಿ ಟೀಂ ಇಂಡಿಯಾ ಬ್ಯಾಟಿಂಗ್ ಅಬ್ಬರ ಮುಂದುವರಿದಿದೆ.

ನಿನ್ನೆ ಅಜೇಯರಾಗುಳಿದಿದ್ದ ಹಿಟ್ ಮ್ಯಾನ್ ರೋಹಿತ್ ಶರ್ಮಾ ಮತ್ತು ಯುವ ಬ್ಯಾಟಿಗ ಯಶಸ್ವಿ ಜೈಸ್ವಾಲ್ ಇಂದು ಅರ್ಧಶತಕ ಸಿಡಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಟೀಂ ಇಂಡಿಯಾ ಇತ್ತೀಚೆಗಿನ ವರದಿ ಬಂದಾಗ ವಿಕೆಟ್ ನಷ್ಟವಿಲ್ಲದೇ 124 ರನ್ ಗಳಿಸಿದೆ.

ರೋಹಿತ್ 2 ಸಿಕ್ಸರ್ ಸಹಿತ 53 ರನ್, ಜೈಸ್ವಾಲ್ 57 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ. ಮೊದಲ ಪಂದ್ಯವಾದರೂ ಮನಮೋಹಕ ಹೊಡೆತಗಳ ಮೂಲಕ ತಾವು ಭವಿಷ್ಯದಲ್ಲಿ ಭಾರತಕ್ಕೆ ಭರವಸೆಯ ತಾರೆಯಾಗಬಹುದು ಎಂಬುದನ್ನು ಜೈಸ್ವಾಲ್ ಸಾಬೀತುಪಡಿಸುತ್ತಿದ್ದಾರೆ. ಅವರು ಇಂದು ಶತಕ ಗಳಿಸಿದರೆ ಮೊದಲ ಪಂದ್ಯದಲ್ಲೇ ಶತಕ ಗಳಿಸಿದ ಅಪರೂಪದ ಸಾಧಕರ ಪಟ್ಟಿಗೆ ಸೇರ್ಪಡೆಯಾಗಲಿದ್ದಾರೆ. ಭಾರತ ಮೊದಲ ಇನಿಂಗ್ಸ್ ನಲ್ಲಿ ಕೇವಲ 26 ರನ್ ಗಳ ಹಿನ್ನಡೆಯಲ್ಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಒಂದೇ ಪಂದ್ಯದಲ್ಲಿ ಟೀಂ ಇಂಡಿಯಾ ಪರ ಇಶಾಂತ್-ಇಶಾನ್ ಪದಾರ್ಪಣೆ!