Publish Date: Fri, 14 Jul 2023 (08:40 IST)
Updated Date: Fri, 14 Jul 2023 (08:59 IST)
ಡೊಮಿನಿಕಾ: ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಚೊಚ್ಚಲ ಟೆಸ್ಟ್ ಪಂದ್ಯವಾಡುತ್ತಿರುವ ಟೀಂ ಇಂಡಿಯಾ ಯುವ ಬ್ಯಾಟಿಗ ಯಶಸ್ವಿ ಜೈಸ್ವಾಲ್ ರೋಹಿತ್ ಜೊತೆ ದಾಖಲೆಯ ಜೊತೆಯಾಟವಾಡಿ ಗಮನ ಸೆಳೆದಿದ್ದಾರೆ.
ನಾಯಕ ರೋಹಿತ್ ಶರ್ಮಾ ಜೊತೆಗೆ ದ್ವಿಶತಕ ಜೊತೆಯಾಟವಾಡಿರುವ ಜೈಸ್ವಾಲ್ ಚೊಚ್ಚಲ ಶತಕ ಸಿಡಿಸಿ ಸಾಧನೆ ಮಾಡಿದ್ದಾರೆ. 143 ರನ್ ಗಳಿಸಿರುವ ಯಶಸ್ವಿ ಇಂದಿಗೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಅವರಿಗೆ ವಿರಾಟ್ ಕೊಹ್ಲಿ ಸಾಥ್ ನೀಡುತ್ತಿದ್ದಾರೆ.
ನಿನ್ನೆ ಹಿಟ್ ಮ್ಯಾನ್ ಜೊತೆಗೆ ಶತಕ ದಾಖಲಿಸಿದ್ದ ಜೈಸ್ವಾಲ್ ಇಂದು ಕಿಂಗ್ ಕೊಹ್ಲಿ ಜೊತೆ ದ್ವಿಶತಕ ಸಿಡಿಸಲಿ ಎಂದು ಅಭಿಮಾನಿಗಳು ಆಶಿಸುತ್ತಿದ್ದಾರೆ. ಇನ್ನು, ಕೆಲವರು ಜೈಸ್ವಾಲ್ ಬ್ಯಾಟಿಂಗ್ ಶೈಲಿ ನೋಡಿ ಶಿಖರ್ ಧವನ್ ರನ್ನು ನೆನೆಸಿಕೊಂಡಿದ್ದು, ಅವರ ಉತ್ತರಾಧಿಕಾರಿ ಎಂದಿದ್ದಾರೆ.