ರಿಕಿ ಪಾಂಟಿಂಗ್, ಸ್ಟೀವ್ ವಾರನ್ನೇ ಹಿಂದಿಕ್ಕಲಿರುವ ವಿರಾಟ್ ಕೊಹ್ಲಿ

Webdunia
ಮಂಗಳವಾರ, 15 ಅಕ್ಟೋಬರ್ 2019 (11:17 IST)
ಮುಂಬೈ: ನಾಯಕತ್ವದ ವಿಚಾರದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾದ ದಿಗ್ಗಜ ನಾಯಕರಾದ ಸ್ಟೀವ್ ವಾ ಮತ್ತು ರಿಕಿ ಪಾಂಟಿಂಗ್ ರನ್ನೇ ಹಿಂದಿಕ್ಕುವ ಹಂತದಲ್ಲಿದ್ದಾರೆ.


ಈಗಾಗಲೇ ಟೆಸ್ಟ್ ಕ್ರಿಕೆಟ್ ನಲ್ಲಿ ಭಾರತೀಯ ಕ್ರಿಕೆಟ್ ನಾಯಕರ ಪೈಕಿಯೇ ಅತೀ ಹೆಚ್ಚು ಗೆಲುವು ದಾಖಲಿಸಿ ನಂ.1 ಪಟ್ಟಕ್ಕೇರಿರುವ ಕೊಹ್ಲಿ ಇದೀಗ ಜಾಗತಿಕ ದಾಖಲೆ ಮಾಡಲಿದ್ದಾರೆ.

ದ.ಆಫ್ರಿಕಾ ವಿರುದ್ಧ ಪುಣೆಯಲ್ಲಿ ಗೆಲುವು ಸಾಧಿಸುವುದರೊಂದಿಗೆ ಕೊಹ್ಲಿ ನಾಯಕರಾಗಿ 30 ನೇ ಗೆಲುವು ಕಂಡಿದ್ದಾರೆ. ಇದರೊಂದಿಗೆ ಜಾಗತಿಕವಾಗಿಯೂ ರಿಕಿ ಪಾಂಟಿಂಗ್ ಮತ್ತು ಸ್ಟೀವ್ ವಾ ಬಳಿಕ ಮೂರನೇ ಯಶಸ್ವೀ ನಾಯಕ ಎಂಬ ದಾಖಲೆ ಹೊಂದಿದ್ದಾರೆ. ಪಾಂಟಿಂಗ್ 77 ಟೆಸ್ಟ್ ಪಂದ್ಯಗಳಲ್ಲಿ ನಾಯಕತ್ವ ವಹಿಸಿ 48 ಗೆಲುವು ಕಂಡಿದ್ದಾರೆ. ವಾ 57 ಪಂದ್ಯಗಳಿಂದ 41 ಗೆಲುವು ಕಂಡಿದ್ದಾರೆ. ಇದೀಗ ಕೊಹ್ಲಿ 50 ಪಂದ್ಯಗಳಿಂದ 30 ಗೆಲುವು ಕಂಡಿದ್ದಾರೆ. ಇದರೊಂದಿಗೆ ಕೊಹ್ಲಿ ಗೆಲುವಿನ ಶತಮಾನ ಶೇ.60 ರಷ್ಟಿದೆ. ಕೊಹ್ಲಿ ಇದೇ ರೀತಿ ಮುಂದುವರಿದರೆ ಮುಂದೊಂದು ದಿನ ಜಾಗತಿಕವಾಗಿಯೂ ಅತೀ ಹೆಚ್ಚು ಗೆಲುವು ಕಂಡ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಬಹುದು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

Asia Cup: ದುಬೈ ನೆಲದಲ್ಲಿ ಪಾಕ್‌ಗೆ ಮಣ್ಣು ಮುಕ್ಕಿಸಿ, ಏಷ್ಯಾ ಕಪ್ ಗೆದ್ದ ಭಾರತ

Asia Cup Final: ಸ್ಪಿನ್ ಸುಳಿಗೆ ಪಾಕ್‌ ತತ್ತರ: ಭಾರತದ ಗೆಲುವಿಗೆ ಸಾಧಾರಣ ಸವಾಲು

Asia Cup Cricket: ಭಾರತಕ್ಕೆ ಶಾಕ್‌: ಫೈನಲ್‌ಗೆ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಅಲಭ್ಯ

ಬಿಸಿಸಿಐ ಸಾರಥಿಯಾಗಿ ಮಿಥುನ್ ಮನ್ಹಾಸ್ ನೇಮಕ: ಕರ್ನಾಟಕದ ರಘುರಾಮ್ ಭಟ್ ಖಜಾಂಚಿ

Asia Cup Cricket: ಫೈನಲ್‌ನಲ್ಲಿ ಭಾರತ–ಪಾಕ್‌ ಮೊದಲ ಬಾರಿ ಮುಖಾಮುಖಿಗೆ ವೇದಿಕೆ ಸಜ್ಜು

ಮುಂದಿನ ಸುದ್ದಿ
Show comments