Select Your Language

Notifications

webdunia
webdunia
webdunia
webdunia

ಧೋನಿಯೇ ಟೀಂ ಇಂಡಿಯಾದ ಕ್ಯಾಪ್ಟನ್! ಕೊಹ್ಲಿ ಈಗ ನಾಮಕಾವಸ್ಥೆ?!

ಧೋನಿಯೇ ಟೀಂ ಇಂಡಿಯಾದ ಕ್ಯಾಪ್ಟನ್! ಕೊಹ್ಲಿ ಈಗ ನಾಮಕಾವಸ್ಥೆ?!
ಮುಂಬೈ , ಮಂಗಳವಾರ, 12 ಮಾರ್ಚ್ 2019 (09:34 IST)
ಮುಂಬೈ: ಟೀಂ ಇಂಡಿಯಾದಲ್ಲಿ ಧೋನಿ ಇಲ್ಲದೇ ಇದ್ದಾಗ ತಂಡದ ಪರಿಸ್ಥಿತಿ ಹೀನಾಯವಾಗುತ್ತದೆ ಎಂಬುದಕ್ಕೆ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ನಾಲ್ಕನೇ ಏಕದಿನ ಪಂದ್ಯವೇ ಸಾಕ್ಷಿ.


ಧೋನಿ ನಾಯಕತ್ವದಿಂದ ಕೆಳಗಿಳಿದರೂ, ಕೊಹ್ಲಿ ನಾಯಕರಾಗಿದ್ದರೂ ತಂಡದ ನಿಜವಾದ ಜುಟ್ಟು ಇರುವುದು ಧೋನಿ ಕೈಯಲ್ಲಿ ಎಂದು ಮೊನ್ನೆಯ ಫಲಿತಾಂಶ ಸಾಬೀತುಪಡಿಸಿದೆ. ಮೈದಾನದಲ್ಲಿದ್ದ ಪ್ರೇಕ್ಷಕರೇ ಧೋನಿಯನ್ನು ಮರಳಿ ಕರೆತರುವಂತೆ ಕೊಹ್ಲಿಗೆ ಕೂಗಿ ಹೇಳಿದ್ದು ಇದಕ್ಕೆ ಪುಷ್ಠಿ ನೀಡುವಂತಿದೆ.

ಈ ಬಗ್ಗೆ ಹೇಳಿಕೆ ನೀಡಿರುವ ಮಾಜಿ ಕ್ರಿಕೆಟಿಗ ಬಿಷನ್ ಸಿಂಗ್ ಬೇಡಿ ‘ಧೋನಿ ಈಗಲೂ ತಂಡದ ನಾಯಕ. ಅವರಿಲ್ಲದೇ ಕೊಹ್ಲಿ ಕುರುಡನಂತಾಗಿದ್ದಾರೆ. ದೋನಿ ಇದ್ದರೆ ತಂಡ ಕೂಲ್ ಆಗಿರುತ್ತದೆ. ಅವರ ಅನುಭವ ತಂಡಕ್ಕೆ ಬೇಕಾಗಿದೆ’ ಎಂದು ಬೇಡಿ ಹೇಳಿದ್ದಾರೆ.

ಮೊನ್ನೆ ಡಿಆರ್ ಎಸ್ ಪಡೆಯುವಲ್ಲಿ ಎಡವಿದ್ದು, ಅಂತಿಮ ಓವರ್ ಗಳಲ್ಲಿ ಕೊಹ್ಲಿ ಸಂಪೂರ್ಣ ತಾಳ ತಪ್ಪಿದ್ದು ನೋಡಿದರೆ ಧೋನಿಯ ಹಿಡಿತ ತಂಡದಲ್ಲಿ ಎಷ್ಟಿದೆ ಎಂಬುದು ಸಾಬೀತಾಗುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಆಸೀಸ್ ಆಟಗಾರನ ಹೆಸರು ಮರೆತು ನಗೆಪಾಟಲಿಗೀಡಾದ ಶಿಖರ್ ಧವನ್