Select Your Language

Notifications

webdunia
webdunia
webdunia
webdunia

ಟೀಂ ಇಂಡಿಯಾ ಮಿಲಿಟರಿ ಕ್ಯಾಪ್ ಧರಿಸಿದ್ದಕ್ಕೆ ತಕರಾರು ತೆಗೆದ ಪಾಕ್ ಗೆ ಮುಖಭಂಗ

ಟೀಂ ಇಂಡಿಯಾ ಮಿಲಿಟರಿ ಕ್ಯಾಪ್ ಧರಿಸಿದ್ದಕ್ಕೆ ತಕರಾರು ತೆಗೆದ ಪಾಕ್ ಗೆ ಮುಖಭಂಗ
ದುಬೈ , ಸೋಮವಾರ, 11 ಮಾರ್ಚ್ 2019 (09:34 IST)
ದುಬೈ: ಆಸ್ಟ್ರೇಲಿಯಾ ವಿರುದ್ಧ ಮೂರನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಆಟಗಾರರು ಮಿಲಿಟರಿ ಕ್ಯಾಪ್ ಧರಿಸಿ ಆಡಿದ್ದದನ್ನು ಪ್ರಶ್ನಿಸಿದ್ದ ಪಾಕ್ ಗೆ ಮುಖಭಂಗವಾಗಿದೆ.


ಐಸಿಸಿ ಇದನ್ನು ನೀವು ಗಮನಿಸಿಲ್ವಾ? ಟೀಂ ಇಂಡಿಯಾ ಮಿಲಿಟರಿ ಕ್ಯಾಪ್ ಧರಿಸುವ ಮೂಲಕ ಕ್ರೀಡೆಯಲ್ಲಿ ರಾಜಕೀಯ ಬೆರೆಸುತ್ತಿದೆ. ಇದರ ಬಗ್ಗೆ ನೀವು ಕ್ರಮ ಕೈಗೊಳ್ಳದಿದ್ದರೆ ನಾವೂ ಮುಂದಿನ ಪಂದ್ಯದಲ್ಲಿ ಕಪ್ಪು ಬ್ಯಾಂಡ್ ಧರಿಸಿ ಆಡಿ ಕಾಶ್ಮೀರದಲ್ಲಿ ಭಾರತದ ದೌರ್ಜನ್ಯವನ್ನು ವಿಶ್ವದ ಎದುರು ಬೆತ್ತಲು ಮಾಡಬೇಕಾಗುತ್ತದೆ ಎಂದೆಲ್ಲಾ ಪಾಕಿಸ್ತಾನದ ವಿದೇಶಾಂಗ ಸಚಿವರು ಮತ್ತು ಮಾಹಿತಿ ತಂತ್ರಜ್ಞಾನ ಸಚಿವರು ಟ್ವಿಟರ್ ಮೂಲಕ ಐಸಿಸಿಗೆ ದೂರಿತ್ತಿದ್ದರು.

ಇದೀಗ ಈ ಬಗ್ಗೆ ಐಸಿಸಿ ಸ್ಪಷ್ಟನೆ ನೀಡಿದ್ದು, ‘ರಾಂಚಿ ಪಂದ್ಯದಲ್ಲಿ ಯೋಧರಿಗೆ ಹಣ ಸಂಗ್ರಹಿಸಲು ಮಿಲಿಟರಿ ಕ್ಯಾಪ್ ಧರಿಸಿ ಆಡುತ್ತಿರುವ ಬಗ್ಗೆ ಬಿಸಿಸಿಐ ಐಸಿಸಿ ಮುಖ್ಯಸ್ಥರ ಬಳಿ ಅನುಮತಿ ಪಡೆದಿತ್ತು’ ಎಂದಿದೆ. ಈ ಮೂಲಕ ಈ ವಿಚಾರವನ್ನು ದೊಡ್ಡದು ಮಾಡಲು ಹೊರಟಿದ್ದ ಪಾಕ್ ಗೆ ಮುಖಭಂಗವಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಮೊಹಾಲಿ ಪಂದ್ಯಕ್ಕೂ ಮೊದಲು ಕ್ರಿಕೆಟಿಗರ ಸಮ್ಮುಖದಲ್ಲಿ ವೇಗಿ ಸಿದ್ಧಾರ್ಥ್ ಕೌಲ್ ಗೆ ಮದುವೆ!