ಮೊಹಾಲಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ನಾಲ್ಕನೇ ಏಕದಿನ ಪಂದ್ಯದಲ್ಲಿ 358 ರನ್ ಗಳ ಬೃಹತ್ ಮೊತ್ತ ಯಶಸ್ವಿಯಾಗಿ ಬೆನ್ನಟ್ಟಿದ ಆಸ್ಟ್ರೇಲಿಯಾ ಟೀಂ ಇಂಡಿಯಾ ವಿರುದ್ಧ ದಾಖಲೆಗಳನ್ನೇ ಮಾಡಿದೆ.
ಭಾರತದ ವಿರುದ್ಧ ಭಾರತದಲ್ಲೇ ಯಾವುದೇ ತಂಡ ರನ್ ಚೇಸ್ ಮಾಡಿರುವ ಗರಿಷ್ಠ ಮೊತ್ತ ಇದಾಗಿದೆ. ಅಷ್ಟೇ ಅಲ್ಲ, ಆಸ್ಟ್ರೇಲಿಯಾ ಯಶಸ್ವಿಯಾಗಿ ಇಷ್ಟು ಬೃಹತ್ ಮೊತ್ತವನ್ನು ಚೇಸ್ ಮಾಡಿ ಗೆದ್ದಿರುವುದು ಇದೇ ಮೊದಲು. ಕೇವಲ ಎರಡನೇ ಪಂದ್ಯವಾಡಿದ ಆಸ್ಟೋನ್ ಟರ್ನರ್ ಈ ರನ್ ಚೇಸ್ ನ ಪ್ರಮುಖ ರೂವಾರಿ. 2013 ರ ಬಳಿಕ ಇದೇ ಮೊದಲ ಬಾರಿಗೆ ಟೀಂ ಇಂಡಿಯಾ ತವರಿನಲ್ಲಿ ಸತತ ಎರಡು ಏಕದಿನ ಪಂದ್ಯಗಳನ್ನು ಸೋತಿದೆ.
ಆಸ್ಟ್ರೇಲಿಯಾಕ್ಕೆ ಮೊಹಾಲಿ ಮೈದಾನ ಅದೃಷ್ಟದ ಮೈದಾನ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಇಲ್ಲಿ ಆಡಿದ ಏಳು ಪಂದ್ಯಗಳ ಪೈಕಿ ಆರನ್ನು ಆಸೀಸ್ ಗೆದ್ದಿದೆ. ಭಾರತದ ವಿರುದ್ಧ ಯಾವುದೇ ತಂಡ ಇಷ್ಟು ದೊಡ್ಡ ಮೊತ್ತವನ್ನು ಬೆನ್ನಟ್ಟಿದ ದಾಖಲೆಗಳಿರಲಿಲ್ಲ. ಅದನ್ನೀಗ ಆಸೀಸ್ ಮಾಡಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ