Publish Date: Sun, 10 Mar 2019 (09:32 IST)
Updated Date: Sun, 10 Mar 2019 (09:33 IST)
ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯನ್ನು ಇಂಗ್ಲೆಂಡ್ ನ ಮಾಜಿ ನಾಯಕ ಮೈಕಲ್ ವಾನ್ ಮೇಕೆಗೆ ಹೋಲಿಸಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧ ಏಕದಿನ ಪಂದ್ಯದಲ್ಲಿ ಸತತ ಎರಡು ಶತಕ ಗಳಿಸಿದ ಕೊಹ್ಲಿ ಇದೀಗ ಆಸೀಸ್ ವಿರುದ್ಧ ಒಟ್ಟು ಎಂಟು ಶತಕ ಗಳಿಸಿ ಸಚಿನ್ ತೆಂಡುಲ್ಕರ್ ದಾಖಲೆಯನ್ನು ಹಿಂದಿಕ್ಕಿದ್ದಾರೆ.
ಕೊಹ್ಲಿಯ ಈ ಪ್ರಚಂಡ ಬ್ಯಾಟಿಂಗ್ ಪರಾಕ್ರಮದ ಬಗ್ಗೆ ಮೈಕಲ್ ವಾನ್ ಟ್ವಿಟರ್ ನಲ್ಲಿ ಅಭಿಮಾನಿಯೊಬ್ಬರ ಪ್ರಶ್ನೆಗೆ ಉತ್ತರಿಸುತ್ತಾ ರನ್ ಮೆಷಿನ್ ಕೊಹ್ಲಿಯನ್ನು ಹೊಗಳುತ್ತಾ ‘ಮೇಕೆ’ ಎಂದಿದ್ದಾರೆ. ಅಷ್ಟೇ ಅಲ್ಲ, ಕೊಹ್ಲಿ ಸಚಿನ್, ಬ್ರಿಯಾನ್ ಲಾರಾಗಿಂತಲೂ ಅತ್ಯುತ್ತಮ ಕ್ರಿಕೆಟಿಗ ಎಂದು ಹೊಗಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ