Webdunia - Bharat's app for daily news and videos

Install App

ತಾವು, ಡಿವಿಲಿಯರ್ಸ್ ಔಟಾಗಿದ್ದು ಆರ್‌ಸಿಬಿಗೆ ಪೆಟ್ಟು ಬಿತ್ತು: ವಿರಾಟ್ ಕೊಹ್ಲಿ

Webdunia
ಸೋಮವಾರ, 30 ಮೇ 2016 (11:58 IST)
ವಿರಾಟ್ ಕೊಹ್ಲಿ ಸೋಲಿನ ಹೊಣೆಯನ್ನು ಸ್ವತಃ ಹೊತ್ತುಕೊಂಡಿದ್ದರೂ,  ಎರಡನೇ ಶ್ರೇಷ್ಟ ತಂಡವಾಗಿ ಆಟವನ್ನು ಮುಗಿಸಿದ್ದು ತಮಗೆ ರುಚಿಸಿಲ್ಲ ಎಂದು ಹೇಳಿದ್ದಾರೆ.  ತಾವು ಮತ್ತು ಡಿವಿಲಿಯರ್ಸ್ ಔಟಾಗಿದ್ದು ದೊಡ್ಡ ಪೆಟ್ಟು ನೀಡಿತು ಎಂದು ರಾಯಲ್ ಚಾಲೆಂಜರ್ಸ್ ಸನ್ ರೈಸರ್ಸ್‌ ವಿರುದ್ಧ ಐಪಿಎಲ್ ಫೈನಲ್ ಸೋಲನ್ನು ವಿಶ್ಲೇಷಿಸಿದರು.
 
 ನಾವು ಈ ಸೀಸನ್‌ನಲ್ಲಿ ಆಡಿದ ರೀತಿ ಹೆಮ್ಮೆಯೆನಿಸುತ್ತದೆ. ಇದು ಬೆಂಗಳೂರಿನ ಜನರಿಗೆ ಅರ್ಪಣೆ. ನಾನು ಮತ್ತು ಎಬಿ ಡಿವಿಲಿಯರ್ಸ್ ಹತ್ತಿರದಲ್ಲೇ ಔಟಾಗಿದ್ದು ದೊಡ್ಡ ಪೆಟ್ಟು ನೀಡಿತು. ಎಬಿ ಜತೆ ಇನ್ನಷ್ಟು ಹೊತ್ತು ನಾನು ಇದ್ದಿದ್ದರೇ ಆಟದ ಗತಿಯೇ ಬದಲಾಗುತ್ತಿತ್ತು ಎಂದು ಕೊಹ್ಲಿ ಪಂದ್ಯ ನಂತರದ ಪ್ರಶಸ್ತಿ ವಿತರಣೆ ಸಮಾರಂಭದಲ್ಲಿ ಹೇಳಿದರು.
 
 ಒಂದು ಸೀಸನ್‌ನಲ್ಲಿ 973 ರನ್ ಸ್ಕೋರ್ ಮಾಡಿ ಕಿತ್ತಲೆ ಕ್ಯಾಪ್ ಗೆದ್ದಿರುವ ಕುರಿತು ಪ್ರಶ್ನಿಸಿದಾಗ, ಇದೊಂದು ಒಳ್ಳೆಯ ಪ್ರೋತ್ಸಾಹಕರ ಬಹುಮಾನ. ಆದರೆ ಫಲಿತಾಂಶ ನಕಾರಾತ್ಮಕವಾಗಿ ಬಂದಿದ್ದು ಒಳ್ಳೆಯ ಭಾವನೆ ಉಂಟುಮಾಡಿಲ್ಲ. ಸನ್‌ರೈಸರ್ಸ್ ಪ್ರಬಲ ಬೌಲಿಂಗ್ ದಾಳಿಯಿಂದ ಗೆದ್ದಿತು ಎಂದು ಕೊಹ್ಲಿ ಪ್ರತಿಕ್ರಿಯಿಸಿದರು.
 
 ತಮ್ಮ ದಾಖಲೆಯ 4 ಶತಕಗಳ ಕುರಿತು ಮಾತನಾಡುತ್ತಾ, ಪಂದ್ಯಾವಳಿಯಲ್ಲಿ ಅತೀ ಹೆಚ್ಚು ಸಿಕ್ಸರುಗಳು ನನಗೆ ಆಶ್ಚರ್ಯ ಉಂಟುಮಾಡಿದೆ. ಆದರೆ ಇಲ್ಲಿ ಹೆಚ್ಚು ಮಾತನಾಡಲು ಬಯಸುವುದಿಲ್ಲ. ಗೆಲುವಿನ ತಂಡ ಇಲ್ಲಿ ಅರ್ಹತೆ ಪಡೆದಿದೆ ಎಂದು ಕೊಹ್ಲಿ ಹೇಳಿದರು. 
 
ಆಸ್ಟ್ರೇಲಿಯಾದ ಆಲ್ ರೌಂಡರ್ ಬೆನ್ ಕಟ್ಟಿಂಗ್ ಅಜೇಯ 39 ರನ್ ಮತ್ತು 2 ವಿಕೆಟ್ ಕಬಳಿಕೆಯಿಂದ ಪಂದ್ಯ ಶ್ರೇಷ್ಟ ಪ್ರಶಸ್ತಿಗೆ ಪುರಸ್ಕೃತರಾಗಿದ್ದಾರೆ.

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.
 

 

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

Digvesh Rathi: ಎರಡು ಭಾರಿ ದಂಡ ವಿಧಿಸಿದರು ನಿಲ್ಲಿಸದ ನೋಟ್‌ಬುಕ್‌ ಸೆಲೆಬ್ರೇಶನ್‌

IPL 2025: ಚೆನ್ನೈ ತಂಡದ ಮಹಾ ಎಡವಟ್ಟು: ನಿಯಮ ಮರೆತು ಪಂದ್ಯ ಸೋತ ಧೋನಿ ಪಡೆ

IPL 2025: ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ 16 ವರ್ಷಗಳ ಬಳಿಕ ಈ ದಾಖಲೆ ಬರೆದ ಆರ್‌ಸಿಬಿ

IPL 2025: ಚೆನ್ನೈ ವಿರುದ್ಧದ ರೋಚಕ ಪಂದ್ಯದಲ್ಲಿ ಗೆದ್ದ ಆರ್‌ಸಿಬಿ: ಮತ್ತೆ ಅಗ್ರಸ್ಥಾನದೊಂದಿಗೆ ಪ್ಲೇಆಫ್‌ಗೆ ಸನಿಹ

RCB vs CSK Match:ಶೆಫರ್ಡ್‌ ಅಬ್ಬರದ ಬ್ಯಾಟಿಂಗ್‌ಗೆ ನಲುಗಿದ ಚೆನ್ನೈ, ಆರ್‌ಸಿಬಿಯಿಂದ ಬಿಗ್ ಟಾರ್ಗೆಟ್‌

ಮುಂದಿನ ಸುದ್ದಿ
Show comments