ಐಪಿಎಲ್ ನಲ್ಲಿ ಕೊಹ್ಲಿ ಪ್ರದರ್ಶನ ಗಮನಿಸಿ ಮನಸ್ಸು ಬದಲಾಯಿಸಿದ ಆಯ್ಕೆಗಾರರು

Krishnaveni K
ಮಂಗಳವಾರ, 2 ಏಪ್ರಿಲ್ 2024 (12:34 IST)
ಮುಂಬೈ: ಐಪಿಎಲ್ 2024 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ವಿರಾಟ್ ಕೊಹ್ಲಿ ಬ್ಯಾಟಿಂಗ್ ಅಬ್ಬರ ಟೀಕಾಕಾರರ ಬಾಯಿಮುಚ್ಚಿಸಿದೆ.

ವಿರಾಟ್ ಕೊಹ್ಲಿ ಇದುವರೆಗೆ ಆಡಿದ ಮೂರು ಪಂದ್ಯಗಳ ಪೈಕಿ ಎರಡು ಪಂದ್ಯಗಳಲ್ಲಿ ಅರ್ಧಶತಕ ಸಿಡಿಸಿದ್ದಾರೆ. ಅವರ ಈ ಆಟ ಗಮನಿಸಿದ ಟೀಂ ಇಂಡಿಯಾ ಆಯ್ಕೆಗಾರರು ಮುಂಬರುವ ಟಿ20 ವಿಶ್ವಕಪ್ ತಂಡದಲ್ಲಿ ಅವರನ್ನು ಪರಿಗಣಿಸುವ ಬಗ್ಗೆ ಮನಸ್ಸು ಬದಲಾಯಿಸಿದ್ದಾರೆ ಎನ್ನಲಾಗಿದೆ.

ಇದಕ್ಕೆ ಮೊದಲು ಟಿ20 ವಿಶ್ವಕಪ್ ನಡೆಯುವ ಪಿಚ್ ಗಳು ನಿಧಾನಗತಿಯದ್ದಾಗಿದ್ದರಿಂದ ಕೊಹ್ಲಿಯನ್ನು ಆಯ್ಕೆ ಮಾಡಲು ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಗೆ ಮನಸ್ಸಿರಲಿಲ್ಲ ಎನ್ನಲಾಗಿತ್ತು. ಆದರೆ ಈಗ ಐಪಿಎಲ್ ಪಂದ್ಯಗಳಲ್ಲಿ ಎಲ್ಲಾ ಆಟಗಾರರ ಪ್ರದರ್ಶನವನ್ನು ಅಜಿತ್ ಅಗರ್ಕರ್ ಸಮಿತಿ ಸೂಕ್ಷ್ಮವಾಗಿ ಅವಲೋಕಿಸುತ್ತಿದೆ.

ಈ ಪೈಕಿ ಕೊಹ್ಲಿ ಪ್ರದರ್ಶನ ಅವರಿಗೆ ಸಮಾಧಾನ ತಂದಿದೆ ಎನ್ನಲಾಗಿದೆ. ಬಹಳ ದಿನಗಳ ನಂತರ ಕ್ರಿಕೆಟ್ ಅಂಕಣಕ್ಕೆ ಮರಳಿದರೂ ಕೊಹ್ಲಿ ತಮ್ಮ ಫಾರ್ಮ್ ಮರೆತಿಲ್ಲ. ಇದು ಆಯ್ಕೆಗಾರರನ್ನು ಇಂಪ್ರೆಸ್ ಮಾಡಿದೆ. ಹೀಗಾಗಿ ಟಿ20 ವಿಶ್ವಕಪ್ ತಂಡದಲ್ಲಿ ಕೊಹ್ಲಿ ಸ್ಥಾನ ಪಡೆಯಲಿದ್ದಾರೆ ಎನ್ನಲಾಗಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs SA: ಸ್ಪಿನ್ನರ್ ಗಳಿಂದ ಬಚಾವ್ ಆದ ಟೀಂ ಇಂಡಿಯಾ

IND vs SA: ಕೊಹ್ಲಿ, ರೋಹಿತ್ ಇಲ್ಲದ ಟೀಂ ಇಂಡಿಯಾ ಟೆಸ್ಟ್ ಮ್ಯಾಚ್ ನೋಡೋರೇ ಇಲ್ಲ

IND vs SA: ಕ್ಯಾಪ್ಟನ್ ಬದಲಾದರೂ ಟೀಂ ಇಂಡಿಯಾದ ಟಾಸ್ ಅದೃಷ್ಟ ಮಾತ್ರ ಬದಲಾಗಿಲ್ಲ

IND vs SA: ಕ್ಯಾಪ್ಟನ್ ಆಗಿ ಹೊಸ ದಾಖಲೆ ಮಾಡಲಿದ್ದಾರೆ ರಿಷಭ್ ಪಂತ್

ಹಳದಿ ಸಂಭ್ರಮದಲ್ಲಿರುವ ಸ್ಮೃತಿ ಮಂಧಾನಳನ್ನು ಕುಣಿಸಿದ ಟೀಂ ಇಂಡಿಯಾ ಆಟಗಾರ್ತಿಯರು, video

ಮುಂದಿನ ಸುದ್ದಿ
Show comments