Webdunia - Bharat's app for daily news and videos

Install App

ಡಿಸೆಂಬರ್ ನಲ್ಲಿ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ಮದುವೆ…?

Webdunia
ಮಂಗಳವಾರ, 24 ಅಕ್ಟೋಬರ್ 2017 (18:10 IST)
ಮುಂಬೈ: ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಲವರ್ಸ್ ಅನ್ನೋದು ಎಲ್ಲರಿಗೂ ತಿಳಿದಿರೋ ವಿಚಾರವೆ. ಆದರೆ ಈ ಬಗ್ಗೆ ಎಲ್ಲೂ ಗುಟ್ಟುಬಿಟ್ಟುಕೊಟ್ಟಿಲ್ಲ. ಆದರೆ ಈ ಗೊಂದು ಸಿಹಿಸುದ್ದಿ ಇದೆ.

ವಿರಾಟ್ ಹಾಗೂ ಅನುಷ್ಕಾ ಮದುವೆ ಆಗುತ್ತಿದ್ದಾರಂತೆ.ಡಿಸೆಂಬರ್‌ನಲ್ಲೇ ಈ ಜೋಡಿ ಹಸೆಮಣೆ ಏರಲಿದ್ದಾರೆ ಎಂದು ಆಂಗ್ಲ ಪತ್ರಿಕೆಗಳು ವರದಿ ಮಾಡಿವೆ. ಈ ಮಧ್ಯೆ ಕೊಹ್ಲಿ ತಮಗೆ ಡಿಸೆಂಬರ್‌ನಲ್ಲಿ ರಜೆ ಬೇಕು ಎಂದು ಬಿಸಿಸಿಐಗೆ ಕೇಳಿದ್ದು, ಮದುವೆ ವಿಷಯಕ್ಕೆ ಮತ್ತಷ್ಟು ಪುಷ್ಟಿ ಸಿಕ್ಕಿದೆ.

ಮೂರು ವರ್ಷದಿಂದ ಡೇಟಿಂಗ್‌ನಲ್ಲಿರುವ ಈ ಜೋಡಿ ಕಳೆದ ಬೇಸಿಗೆಯಲ್ಲಿ ಎಂಗೇಜ್‌ಮೆಂಟ್ ಮಾಡಿಕೊಳ್ತಾರೆ ಎನ್ನಲಾಗಿತ್ತು. ಮುಸೌರಿಯಲ್ಲಿ ಈ ಜೋಡಿ ಕೆಲ ದಿನ ತಂಗಿದ್ದರಿಂದ ಅಲ್ಲಿಯೇ ಅವರ ನಿಶ್ಚಿತಾರ್ಥ ನಡೆದು ಹೋಗಿದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ ಆಗ ಅಂತಹುದೇನೂ ನಡೆದಿಲ್ಲ ಅಂತಾ ಅನುಷ್ಕಾ- ಕೊಹ್ಲಿ ವಿವರಣೆ ನೀಡಿದ್ದರು. 

ಈಗ ಕೊಹ್ಲಿ ಕ್ರಿಕೆಟ್‌ನಿಂದ ಬ್ರೇಕ್ ಕೇಳಿರುವುದರಿಂದ ಈ ಜೋಡಿ ನೇರ ಮದುವೆ ಆಗಲು ಸಜ್ಜಾಗಿದೆ ಎಂಬ ಮಾತು ಕೇಳಿ ಬಂದಿವೆ. ಅಲ್ಲದೆ ಇತ್ತೀಚೆಗೆ ಈ ಕ್ಯೂಟ್ ಪೇರ್ ಮಾನ್ಯವರ್ ಜಾಹೀರಾತಿನಲ್ಲಿ ಕಾಣಿಸಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸೆನ್ಸೇಶನ್ ಕ್ರಿಯೆಟ್ ಮಾಡಿತ್ತು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಭಾರತ ಪಾಕಿಸ್ತಾನ ಕ್ರಿಕೆಟ್: ಪಹಲ್ಗಾಮ್ ನಲ್ಲಿ ಪತಿ ಮೃತದೇಹದ ಮುಂದೆ ಕೂತ ಮಹಿಳೆಯರ ಮರೆತು ಹೋಯ್ತಾ

ಭಾರತ ಪಾಕಿಸ್ತಾನ ಕ್ರಿಕೆಟ್ ಪ್ರೇಮಿಗಳಿಗೆ ಸಿಹಿ ಸುದ್ದಿ ನೀಡಿದ ಕೇಂದ್ರ ಸರ್ಕಾರ

ಏಷ್ಯಾ ಕಪ್ ಗೆ ಆಯ್ಕೆ ಮಾಡದಿದ್ದರೇನಂತೆ ಶ್ರೇಯಸ್ ಅಯ್ಯರ್ ಗೆ ದೊಡ್ಡ ಸ್ಥಾನ ಕೊಡಲು ಮುಂದಾದ ಬಿಸಿಸಿಐ

ಬಾತುಕೋಳಿ ತಿನ್ನೋದು ಬಿಟ್ಟ ಚೀನಿಯರು, ಭಾರತ ಕ್ರೀಡೆಗೂ ತಟ್ಟಿದ ಅದರ ಬಿಸಿ

ಏಷ್ಯಾ ಕಪ್ ಗೆ ಟೀಂ ಇಂಡಿಯಾ ಘೋಷಣೆಯಾಗುತ್ತಿದ್ದಂತೇ ಶ್ರೇಯಸ್ ಅಯ್ಯರ್ ಫ್ಯಾನ್ಸ್ ಗರಂ

ಮುಂದಿನ ಸುದ್ದಿ
Show comments