Publish Date: Mon, 13 Aug 2018 (09:13 IST)
Updated Date: Mon, 13 Aug 2018 (09:15 IST)
ಲಾರ್ಡ್ಸ್: ಇಂಗ್ಲೆಂಡ್ ವಿರುದ್ಧ ದ್ವಿತೀಯ ಟೆಸ್ಟ್ ಸೋತ ಬಳಿಕ ತೀವ್ರ ನಿರಾಶೆಗೊಂಡಿರುವ ನಾಯಕ ವಿರಾಟ್ ಕೊಹ್ಲಿ ನಾವು ಆಡಿದ ಚಂದಕ್ಕೆ ನಮಗೆ ಹೀಗೇ ಆಗಬೇಕಿತ್ತು ಎಂದಿದ್ದಾರೆ.
ನಾವು ಸೋಲಿಗೆ ಅರ್ಹರಾಗಿದ್ದೆವು. ಗೆಲುವಿಗೆ ಯಾವ ರೀತಿಯಿಂದಲೂ ನಮ್ಮ ತಂಡ ಅರ್ಹವಾಗಿರಲಿಲ್ಲ. ಇಂಗ್ಲೆಂಡ್ ಎಲ್ಲಾ ವಿಭಾಗದಲ್ಲಿ ಅತ್ಯುತ್ತಮ ಪ್ರದರ್ಶನ ತೋರಿತು. ಇಷ್ಟು ಚೆನ್ನಾಗಿ ಆಡಿದ ಮೇಲೆ ಯಾವುದೇ ತಂಡವಾದರೂ ಗೆಲ್ಲಲೇಬೇಕು ಎಂದು ಪಂದ್ಯದ ನಂತರ ವಿರಾಟ್ ಕೊಹ್ಲಿ ಪ್ರತಿಕ್ರಿಯಿಸಿದ್ದಾರೆ.
ಆದರೆ ಸೋಲಿಗೆ ಪಿಚ್, ಪರಿಸ್ಥಿತಿಗಳನ್ನೇ ದೂರಿಕೊಂಡು ಕೂರುವುದಿಲ್ಲ. ಯಾವುದೇ ಪರಿಸ್ಥಿತಿಯಿದ್ದರೂ ನಾವು ಚೆನ್ನಾಗಿ ಆಡಬೇಕಿತ್ತು. ಆಡದೇ ಸೋತೆವು ಎಂದು ವಿರಾಟ್ ಕೊಹ್ಲಿ ಪರಾಮರ್ಶಿಸಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.