Select Your Language

Notifications

webdunia
webdunia
webdunia
webdunia

ಕಳಪೆ ಬ್ಯಾಟಿಂಗ್ ಮಾಡಿ ಟೀಕೆಗೊಳಗಾದ ಟೀಂ ಇಂಡಿಯಾ ನೆರವಿಗೆ ಬಂದ ಇಂಗ್ಲೆಂಡ್ ವೇಗಿ

ಕಳಪೆ ಬ್ಯಾಟಿಂಗ್ ಮಾಡಿ ಟೀಕೆಗೊಳಗಾದ ಟೀಂ ಇಂಡಿಯಾ ನೆರವಿಗೆ ಬಂದ ಇಂಗ್ಲೆಂಡ್ ವೇಗಿ
ಲಾರ್ಡ್ಸ್ , ಭಾನುವಾರ, 12 ಆಗಸ್ಟ್ 2018 (08:25 IST)
ಲಾರ್ಡ್ಸ್: ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಪಂದ್ಯ ಆರಂಭವಾದ ಮೊದಲ ದಿನವೇ 107 ರನ್ ಗಳಿಗೆ ಬಾಲ ಮುದುರಿಕೊಂಡ ಟೀಂ ಇಂಡಿಯಾ ನೆರವಿಗೆ ಇಂಗ್ಲೆಂಡ್ ವೇಗಿ ಜೇಮ್ಸ್ ಆಂಡರ್ಸನ್ ಬಂದಿದ್ದಾರೆ.
 

ಜೇಮ್ಸ್ ಆಂಡರ್ಸನ್ ಮಾರಕ ಬೌಲಿಂಗ್ ದಾಳಿಗೆ ಸಿಲುಕಿದ ಟೀಂ ಇಂಡಿಯಾ ಮೊದಲ ಇನಿಂಗ್ಸ್ ನಲ್ಲಿ 107 ಕ್ಕೆ ಆಲೌಟ್ ಆಗಿತ್ತು. ಆಂಡರ್ಸನ್ 5 ವಿಕೆಟ್ ಕಿತ್ತಿದ್ದರು.

ಆದರೆ ಇದಕ್ಕೆ ಟೀಂ ಇಂಡಿಯಾ ಬ್ಯಾಟಿಂಗ್ ನ್ನು ಎಲ್ಲರೂ ಹಿಗ್ಗಾ ಮುಗ್ಗಾ ಟೀಕಿಸುತ್ತಿದ್ದರೆ, ಆಂಡರ್ಸನ್ ಮಾತ್ರ ಭಾರತೀಯ ಬ್ಯಾಟ್ಸ್ ಮನ್ ಗಳ ಪರವಾಗಿ ಮಾತನಾಡಿದ್ದಾರೆ. ಪಿಚ್ ಮಳೆ ಬಿದ್ದಿದ್ದರಿಂದ ಎಷ್ಟು ವೇಗಿಗಳಿಗೆ ಸಹಕಾರಿ ನೀಡುತ್ತಿತ್ತೆಂದರೆ ಇಂಗ್ಲೆಂಡ್ ಮೊದಲು ಬ್ಯಾಟಿಂಗ್ ಮಾಡಿದ್ದರೂ ಇದೇ ಗತಿಯಾಗುತ್ತಿತ್ತು ಎಂದಿದ್ದಾರೆ. ಆ ಮೂಲಕ ಇದು ಬ್ಯಾಟ್ಸ್ ಮನ್ ಗಳ ತಪ್ಪಲ್ಲ, ಪಿಚ್ ಹಾಗೇ ಇತ್ತು ಎಂದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.      

Share this Story:

Follow Webdunia kannada

ಮುಂದಿನ ಸುದ್ದಿ

ಲಾರ್ಡ್ಸ್ ಮೈದಾನದಲ್ಲಿ ಸಚಿನ್ ಕೈಲಾಗದ್ದು ವಿರಾಟ್ ಕೊಹ್ಲಿಯಿಂದ ದಾಖಲಾಗುತ್ತಾ?!