ನವದೆಹಲಿ: ಮುಂಬರುವ ಇಂಗ್ಲೆಂಡ್ ಸರಣಿಗೆ ಸಜ್ಜಾಗುವ ಉದ್ದೇಶದಿಂದ ಕೌಂಟಿ ಕ್ರಿಕೆಟ್ ಕ್ಲಬ್ ಸರ್ರೆ ಪರ ಆಡಲು ಸಜ್ಜಾಗಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಭಾರೀ ಮೊತ್ತದ ಸಂಭಾವನೆ ಪಡೆಯಲಿದ್ದಾರೆಯೇ?!
ಕೊಹ್ಲಿ ಕೌಂಟಿ ಕ್ರಿಕೆಟ್ ಆಡುವ ಸುದ್ದಿ ಬೆನ್ನಲ್ಲೇ ಇಂತಹದ್ದೊಂದು ವಿಚಾರ ಓಡಾಡಲು ಪ್ರಾರಂಭವಾಗಿದೆ. ಆದರೆ ಇದಕ್ಕೆ ಈಗ ಸರ್ರೆ ತಂಡ ಸ್ಪಷ್ಟನೆ ನೀಡಿದೆ.
‘ವಿರಾಟ್ ಕೊಹ್ಲಿ ಭಾರೀ ಮೊತ್ತದ ಸಂಭಾವನೆಯನ್ನೇನೂ ಪಡೆಯುತ್ತಿಲ್ಲ. ಅವರೇ ವಿಮಾನ ಯಾನ, ವಸತಿ, ಊಟದ ವೆಚ್ಚವನ್ನು ತಾವೇ ಭರಿಸುತ್ತಾರೆ. ಪಂದ್ಯಕ್ಕೂ ಕಡಿಮೆ ಮೊತ್ತದ ಸಂಭಾವನೆ ಪಡೆಯಲಿದ್ದಾರೆ. ಇಂಗ್ಲೆಂಡ್ ಸರಣಿಗೆ ಸಜ್ಜಾಗುವುದೊಂದೇ ಅವರ ಉದ್ದೇಶ. ಸಂಭಾವನೆ ಬಗ್ಗೆ ಅವರು ತಲೆಕೆಡಿಸಿಕೊಂಡಿಲ್ಲ’ ಎಂದು ಮೂಲಗಳು ಹೇಳಿವೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.
ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!