Select Your Language

Notifications

webdunia
webdunia
webdunia
webdunia

ಆಫ್ಘಾನಿಸ್ತಾನ ಟೆಸ್ಟ್ ಸರಣಿಗೆ ಮೇ 8 ರಂದು ಟೀಂ ಇಂಡಿಯಾ ಆಯ್ಕೆ

ಆಫ್ಘಾನಿಸ್ತಾನ ಟೆಸ್ಟ್ ಸರಣಿಗೆ ಮೇ 8 ರಂದು ಟೀಂ ಇಂಡಿಯಾ ಆಯ್ಕೆ
ಮುಂಬೈ , ಶನಿವಾರ, 5 ಮೇ 2018 (07:48 IST)
ಮುಂಬೈ: ಜೂನ್ ತಿಂಗಳಲ್ಲಿ ಬೆಂಗಳೂರಿನಲ್ಲಿ ಅಫ್ಘಾನಿಸ್ತಾನ ವಿರುದ್ಧ ನಡೆಯಲಿರುವ ಏಕೈಕ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾವನ್ನು ಮೇ 8ಕ್ಕೆ ಆಯ್ಕೆ ಸಮಿತಿ ಆಯ್ಕೆ ನಡೆಸಲಿದೆ.

ಈ ಟೆಸ್ಟ್ ಪಂದ್ಯಕ್ಕೆ ನಾಯಕ ವಿರಾಟ್ ಕೊಹ್ಲಿ ಲಭ್ಯರಿರುವುದಿಲ್ಲ. ಕೊಹ್ಲಿ ಈ ಸಂದರ್ಭದಲ್ಲಿ ಇಂಗ್ಲೆಂಡ್ ಸರಣಿಗೆ ಸಜ್ಜಾಗಲು ಕೌಂಟಿ ಕ್ರಿಕೆಟ್ ಆಡಲಿದ್ದಾರೆ

ಇದೇ ಸಂದರ್ಭದಲ್ಲಿ ಇಂಗ್ಲೆಂಡ್ ಗೆ ತೆರಳಲಿರುವ ಭಾರತ ಎ ತಂಡದ ಜತೆಗೆ ಅಜಿಂಕ್ಯಾ ರೆಹಾನೆ, ಇಶಾಂತ್ ಶರ್ಮಾ,  ಮುರಳಿ ವಿಜಯ್ ಮುಂತಾದ ಹಿರಿಯ ಆಟಗಾರರನ್ನೂ ಕಳುಹಿಸುವ ಚಿಂತನೆ ಬಿಸಿಸಿಐಗಿದೆ. ಹೀಗಾಗಿ ಭಾರತ ತಂಡದ ನಾಯಕತ್ವ ಯಾರು ವಹಿಸಬಹುದು ಎಂಬ ಕುತೂಹಲ ಮೂಡಿದೆ. ಜೂನ್ 14-18 ರವರೆಗೆ ಈ ಟೆಸ್ಟ್ ಪಂದ್ಯ ನಡೆಯಲಿದೆ. ಅದಾದ ಬಳಿಕ ಟೀಂ ಇಂಡಿಯಾ ಪ್ರವಾಸ ಮಾಡಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಕೊನೆಗೂ ಟೀಂ ಇಂಡಿಯಾಗೆ ಕೈ ಕೊಡಲು ರೆಡಿಯಾದ್ರು ವಿರಾಟ್ ಕೊಹ್ಲಿ!