ಮುಂಬೈ: ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುವ ಕ್ರಿಕೆಟಿಗ ಅಂಬಟಿ ರಾಯುಡು ಈ ವರ್ಷ ಐಪಿಎಲ್ ನಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದ್ದರು. ಅವರ ಲಕ್ಕಿ ಚಾರ್ಮ್ ಏನು ಗೊತ್ತಾ?
ಹರ್ಭಜನ್ ಸಿಂಗ್ ಜತೆಗಿನ ಟಾಕ್ ಶೋ ಒಂದರಲ್ಲಿ ಅಂಬಟಿ ರಾಯುಡು ಮಹಾನ್ ರಹಸ್ಯವೊಂದನ್ನು ಬಾಯ್ಬಿಟ್ಟಿದ್ದಾರೆ. ಅದೇನೆಂದರೆ ರಾಯುಡು ಪ್ರತೀ ವರ್ಷ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯಿಂದ ಒಂದು ಬ್ಯಾಟ್ ಪಡೆದುಕೊಳ್ಳುತ್ತಾರಂತೆ!
ಅದೇಕೆ ಹಾಗೆ? ಕೊಹ್ಲಿಯಿಂದ ಪಡೆಯುವ ಬ್ಯಾಟ್ ತನಗೆ ಅದೃಷ್ಟ ತಂದುಕೊಡುತ್ತದೆ ಎಂಬ ವಿಚಿತ್ರ ನಂಬಿಕೆ ರಾಯುಡು ಅವರದ್ದು. ಅದಕ್ಕೇ ಹಾಗೆ ಮಾಡುತ್ತಾರಂತೆ. ಆ ಬ್ಯಾಟ್ ನಿಂದ ತನಗೆ ಸಾಕಷ್ಟು ರನ್ ಗಳಿಸಲು ಸಾಧ್ಯವಾಗುತ್ತದೆ ಎಂದು ಅವರು ನಂಬಿದ್ದಾರೆ. ಕ್ರಿಕೆಟಿಗರೂ ಎಂತೆಂಥಾ ನಂಬಿಕೆ ಇಟ್ಟುಕೊಂಡಿರುತ್ತಾರೆ ನೋಡಿ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.