ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬ ಒಂದು ಗಾದೇ ಇದೆಯಲ್ಲಾ. ಅದು ಈ ಹುಡುಗನನ್ನು ನೋಡಿದರೆ ಗೊತ್ತಾಗುತ್ತದೆ. ಈಗಷ್ಟೇ ಅಮ್ಮನ ಮಡಿಲಿನಿಂದ ಹೊರಬಂದ ಮೂರೂವರೆ ವರ್ಷದ ಪುಟ್ಟ ಬಾಲಕನೊಬ್ಬ ರೋಹಿತ್, ಧೋನಿ ಶಾಟ್ ಗಳನ್ನು ನೆನಪಿಸುವ ರೀತಿಯಲ್ಲಿ ಬ್ಯಾಟಿಂಗ್ ಮಾಡುವ ವಿಡಿಯೋವೊಂದು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಸಾಮಾನ್ಯವಾಗಿ ಮಕ್ಕಳು ಕ್ರಿಕೆಟ್ ಆಡುವುದು ಹೊಸತಲ್ಲ. ಆದರೆ ಈ ಬಾಲಕ ಪ್ಲಾಸ್ಟಿಕ್ ಚೆಂಡಿನಲ್ಲಿ ಪಕ್ಕಾ ಕ್ರಿಕೆಟಿಂಗ್ ಶಾಟ್ ಗಳನ್ನು ಹೊಡೆಯುತ್ತಾನೆ. ಆತನ ಹೊಡೆತಗಳನ್ನು ನೋಡಿದರೆ ದಿಗ್ಗಜ ಆಟಗಾರರ ಶೈಲಿಯೇ ನೆನಪಾಗುತ್ತದೆ.
ವೇಗದ ಎಸೆಗಳಿಗೆ ವೃತ್ತಿಪರ ಕ್ರಿಕೆಟಿಗನಂತೆ ವಿಭಿನ್ನ ರೀತಿಯ ಹೊಡೆತಗಳನ್ನು ಹೊಡೆಯುತ್ತಾನೆ. ರೋಹಿತ್ ಶರ್ಮಾರ ಪುಲ್ ಶಾಟ್, ಧೋನಿಯ ಹೆಲಿಕಾಪ್ಟರ್ ಶಾಟ್, ಕೊಹ್ಲಿ ಕವರ್ ಡ್ರೈವ್ ಎಲ್ಲವನ್ನೂ ಪ್ರದರ್ಶಿಸುತ್ತಾನೆ.
ಈತನ ಬ್ಯಾಟಿಂಗ್ ಗೆ ಮನಸೋತಿರುವ ನೆಟ್ಟಿಗರು ಸರಿಯಾದ ಟ್ರೈನಿಂಗ್ ಕೊಟ್ಟರೆ ಈತ ಭವಿಷ್ಯದಲ್ಲಿ ಅತ್ಯುತ್ತಮ ಕ್ರಿಕೆಟಿಗನಾಗುವುದರಲ್ಲಿ ಸಂಶಯವಿಲ್ಲ ಎಂದಿದ್ದಾರೆ. ಈ ವೈರಲ್ ವಿಡಿಯೋ ಇಲ್ಲಿದೆ ನೋಡಿ.