Publish Date: Sat, 07 Jun 2025 (10:01 IST)
Updated Date: Sat, 07 Jun 2025 (10:06 IST)
ಬೆಂಗಳೂರು: ನಾನೇನಾದರೂ ಈಗಲೂ ಆರ್ ಸಿಬಿ ಮಾಲಿಕನಾಗಿದ್ದಿದ್ದರೆ ಕೆಎಲ್ ರಾಹುಲ್ ಬಗ್ಗೆ ಏನು ನಿರ್ಧಾರ ತೆಗೆದುಕೊಳ್ತಿದ್ದೆ ಎಂದು ವಿಜಯ್ ಮಲ್ಯ ನೀಡಿರುವ ಹೇಳಿಕೆ ಈಗ ವೈರಲ್ ಆಗಿದೆ.
ಕೆಎಲ್ ರಾಹುಲ್ ಆರ್ ಸಿಬಿ ತಂಡಕ್ಕೆ ಬರಬೇಕು ಎಂಬುದು ಅಭಿಮಾನಿಗಳ ಬಯಕೆಯಾಗಿತ್ತು. ಆದರೆ ಕಳೆದ ಬಾರಿ ಬಿಡ್ಡಿಂಗ್ ನಲ್ಲಿ ಆರ್ ಸಿಬಿ ಕೆಎಲ್ ರಾಹುಲ್ ರನ್ನು ಕೊಳ್ಳಲಿಲ್ಲ. ಬಿಡ್ಡಿಂಗ್ ಮಾಡಿದರೂ ಕೊನೆಯಲ್ಲಿ ಕೈ ಬಿಟ್ಟಿತ್ತು. ಇದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಯಿತು.
ನಮ್ಮವರೇ ಆದ ಕನ್ನಡಿಗ ಆಟಗಾರನನ್ನು ಆರ್ ಸಿಬಿ ಕಡೆಗಣಿಸುತ್ತಿದೆ ಎಂದು ಕನ್ನಡಿಗರಲ್ಲೂ ಅಸಮಾಧಾನವಿದೆ. ಇದೀಗ ಕೆಎಲ್ ರಾಹುಲ್ ಬಗ್ಗೆ ವಿಜಯ್ ಮಲ್ಯ ಸ್ಪೋಟಕ ಹೇಳಿದ್ದಾರೆ. ಪಾಡ್ ಕಾಸ್ಟ್ ಒಂದರಲ್ಲಿ ಮಾತನಾಡಿರುವ ವಿಜಯ್ ಮಲ್ಯ ಹಲವು ವಿಚಾರಗಳನ್ನು ಹೇಳಿದ್ದಾರೆ.
ಈ ವೇಳೆ ಕೆಎಲ್ ರಾಹುಲ್ ಬಗ್ಗೆಯೂ ಮಾತನಾಡಿದ್ದಾರೆ. ನಾನೇನಾದರೂ ಈಗಲೂ ಆರ್ ಸಿಬಿ ಮಾಲಿಕನಾಗಿದ್ದರೆ ಖಂಡಿತಾ ಕೆಎಲ್ ರಾಹುಲ್ ರನ್ನು ಬಿಡ್ಡಿಂಗ್ ನಲ್ಲಿ ಬಿಟ್ಟುಕೊಡ್ತಾ ಇರಲಿಲ್ಲ. ಆರ್ ಸಿಬಿ ತಂಡದಲ್ಲೇ ಉಳಿಸಿಕೊಳ್ಳುತ್ತಿದ್ದೆ ಎಂದಿದ್ದಾರೆ. ದೇಶದ ಈ ನಾಲ್ಕು ಆಟಗಾರರನ್ನು ಆರ್ ಸಿಬಿಗೆ ಖರೀದಿ ಮಾಡ್ತಿದ್ದೆ. ಜಸ್ಪ್ರೀತ್ ಬುಮ್ರಾ, ಸೂರ್ಯಕುಮಾರ್ ಯಾದವ್, ಕೆಎಲ್ ರಾಹುಲ್ ಮತ್ತು ರಿಷಭ್ ಪಂತ್ ರನ್ನು ಆರ್ ಸಿಬಿಗೆ ಆಯ್ಕೆ ಮಾಡುತ್ತಿದ್ದೆ ಎಂದಿದ್ದಾರೆ. ಅವರ ಹೇಳಿಕೆ ಈಗ ವೈರಲ್ ಆಗಿದೆ.
ಈ ಹಿಂದೆ ಅನಿಲ್ ಕುಂಬ್ಳೆಯನ್ನೂ ಅವರು ತಂಡದಿಂದ ಕೈ ಬಿಡಲು ಒಪ್ಪಿರಲಿಲ್ಲ. ಅವರು ನಮ್ಮ ಹುಡುಗ, ಅವರನ್ನು ಕೈ ಬಿಡಬೇಡಿ ಎಂದು ಹೇಳಿದ್ದರಂತೆ.