Select Your Language

Notifications

webdunia
webdunia
webdunia
webdunia

RCB: ಆರ್ ಸಿಬಿ ಮಾಲಿಕರು ನಿಜಕ್ಕೂ ಯಾರು, ತಂಡಕ್ಕೆ ಈ ಹೆಸರು ಬಂದಿದ್ದು ಹೇಗೆ ಇಲ್ಲಿದೆ ವಿವರ

RCB
Photo Credit: X
ಬೆಂಗಳೂರು: ಐಪಿಎಲ್ ನಲ್ಲಿ ನಮ್ಮ ಬೆಂಗಳೂರು ತಂಡ ಆರ್ ಸಿಬಿ ಎಂದು ಎಷ್ಟೋ ಜನ ಅಂಧ ಅಭಿಮಾನಿಗಳಿದ್ದಾರೆ. ಈ ಬಾರಿ ಕಪ್ ಗೆದ್ದ ಮೇಲಂತೂ ಅವರ ಅಭಿಮಾನ ಹೆಚ್ಚಾಗಿದೆ. ಇದೇ ಅಂಧಾಭಿಮಾನಕ್ಕೆ ಸಿಲುಕಿ ಈಗ ಕಾಲ್ತುಳಿತವಾಗಿ 11 ಮಂದಿಯ ಪ್ರಾಣ ಹೋಗಿದೆ. ಅಷ್ಟಕ್ಕೂ ಈ ಆರ್ ಸಿಬಿ ತಂಡದ ಮಾಲಿಕರು ಯಾರು, ತಂಡಕ್ಕೆ ಈ ಹೆಸರು ಬಂದಿದ್ದು ಹೇಗೆ ಇಲ್ಲಿದೆ ವಿವರ.

ಆರ್ ಸಿಬಿ ತಂಡ ಮೊದಲು ಕನ್ನಡಿಗರೇ ಆದ ಉದ್ಯಮಿ ವಿಜಯ್ ಮಲ್ಯ ಒಡೆತನದಲ್ಲಿತ್ತು. ಆದರೆ ಸಾವಿರಾರು ಕೋಟಿ ಸಾಲ ಮಾಡಿ ಲಂಡನ್ ಗೆ ಪರಾರಿಯಾಗುವ ಮುನ್ನ ವಿಜಯ್ ಮಲ್ಯ ತಮ್ಮ ಕಂಪನಿ ಯುನೈಟೆಡ್ ಬ್ಯೂವರಿಸ್ ನ್ನು ಬ್ರಿಟನ್ ಮೂಲದ ಡಿಯಾಜಿಯೋ ಕಂಪನಿಗೆ ಮಾರಾಟ ಮಾಡಿತು.

ಯುನೈಟೆಡ್ ಬ್ರೂವರಿಸ್ ಕಂಪನಿಯ ಒಂದು ವಿಸ್ಕಿಯ ಹೆಸರು ರಾಯಲ್ ಚಾಲೆಂಜ್ ಎಂಬುದಾಗಿದೆ. ಇದೇ ವಿಸ್ಕಿಯ ಹೆಸರಿಟ್ಟುಕೊಂಡೇ ಆರ್ ಸಿಬಿ ತಂಡಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎಂದು ಹೆಸರು ಬಂತು.

ಅದೇ ಕಂಪನಿಯೇ ಆರ್ ಸಿಬಿ ಫ್ರಾಂಚೈಸಿಯ ಮಾಲಿಕರಾಗಿದ್ದಾರೆ. ಈ ಹಿಂದೆ ವಿಜಯ್ ಮಲ್ಯ ಇಡೀ ತಂಡವನ್ನು ವಿಸರ್ಜಿಸಿದಾಗಲೂ ಕೊಹ್ಲಿಯನ್ನು ಉಳಿಸಿಕೊಂಡಿದ್ದರು. ಈಗ ಕೊಹ್ಲಿ ಎಂಬ ಹೆಸರಿಗೆ ಬೆಲೆಕಟ್ಟಲಾಗದ ಮೌಲ್ಯವಿದೆ.  ಈ ಕಾರಣಕ್ಕೆ ಆರ್ ಸಿಬಿ ಮಾಲಿಕರೂ ಕೊಹ್ಲಿಯನ್ನು ಇದುವರೆಗೆ ಬಿಟ್ಟುಕೊಟ್ಟಿಲ್ಲ. ಇಲ್ಲಿನ ಅಭಿಮಾನಿಗಳ ಮೇಲಿನ ಪ್ರೀತಿಗೆ ಕೊಹ್ಲಿಯೂ ಈ ತಂಡವನ್ನು ಬಿಟ್ಟುಹೋಗಲ್ಲ ಎಂದಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

Nikhil Sosale: ಅನುಷ್ಕಾ ಶರ್ಮಾಗೆ ಅಂಟಿಕೊಂಡೇ ಇದ್ದರು ಅರೆಸ್ಟ್ ಆಗಿರುವ ನಿಖಿಲ್ ಸೋಸಲೆ ಪತ್ನಿ