Publish Date: Tue, 24 Sep 2019 (09:32 IST)
Updated Date: Tue, 24 Sep 2019 (09:34 IST)
ಬೆಂಗಳೂರು: ವಿಜಯ್ ಹಜಾರೆ ಏಕದಿನ ಟ್ರೋಫಿ ಇಂದಿನಿಂದ ಆರಂಭವಾಗಲಿದ್ದು, ಕರ್ನಾಟಕಕ್ಕೆ ಹೈದರಾಬಾದ್ ಎದುರಾಳಿಯಾಗಿದೆ.
ಕರ್ನಾಟಕ ತಂಡಕ್ಕೆ ಮನೀಶ್ ಪಾಂಡೆ ನಾಯಕರಾಗಿದ್ದು, ಕೆಎಲ್ ರಾಹುಲ್ ಕೂಡಾ ತಂಡದಲ್ಲಿದ್ದಾರೆ ಎನ್ನುವುದೇ ಹೆಚ್ಚಿನ ಬಲ ನೀಡಲಿದೆ. ಅತ್ತ ಹೈದರಾಬಾದ್ ಗೆ ಅಂಬಟಿ ರಾಯುಡು ಬಲ ತುಂಬಲಿದ್ದಾರೆ.
ಮೇಲ್ನೋಟಕ್ಕೆ ಕರ್ನಾಟಕವೇ ಮೇಲುಗೈ ಹೊಂದಿದೆ. ರಾಷ್ಟ್ರೀಯ ತಂಡದಲ್ಲಿ ಆಡಿದ ಅನುಭವವುಳ್ಳ ರಾಹುಲ್, ಮನೀಶ್ ಜತೆಗೆ ಶ್ರೇಯಸ್ ಗೋಪಾಲ್, ಕೆ ಗೌತಮ್, ಸುಚಿತ್ ಬ್ಯಾಟಿಂಗ್ ನಲ್ಲೂ ಮಿಂಚಬಲ್ಲರು. ಇನ್ನು ಬೌಲಿಂಗ್ ವಿಭಾಗದಲ್ಲಿ ಅಭಿಮನ್ಯು ಮಿಥುನ್ ಪ್ರಮುಖ ಶಕ್ತಿಯಾಗಿದ್ದಾರೆ.