Select Your Language

Notifications

webdunia
webdunia
webdunia
webdunia

ಔಟಾಗಿದ್ದಕ್ಕೆ ಅವಮಾನವಾಯ್ತಾ.. ಕ್ಯಾಮರಾ ಕಡೆ ನೋಡಿ ವೈಭವ್ ಸೂರ್ಯವಂಶಿ ಇದೇನು ಪೋಸ್ Video

Viabhav Suryavamshi
Photo Credit: X
ಹೈದರಾಬಾದ್: ಐಪಿಎಲ್ 2026 ರಲ್ಲಿ ನಿನ್ನೆ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಗೋಲ್ಡನ್ ಡಕ್ ಔಟಾಗಿದ್ದ ವೈಭವ್ ಸೂರ್ಯವಂಶಿ ಕ್ಯಾಮರಾ ಕಡೆ ನೋಡುತ್ತಾ ಮಾಡಿದ ಮುಖಭಾವ ಎಲ್ಲರ ಗಮನ ಸೆಳೆದಿದೆ.

ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ನಿನ್ನೆ ನಡೆದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ 57 ರನ್ ಗಳ ಸೋಲು ಅನುಭವಿಸಿದೆ. ಈ ಕೂಟದಲ್ಲಿ ಇದೇ ಮೊದಲ ಸೋಲು ಇದಾಗಿತ್ತು. ವಿಶೇಷವೆಂದರೆ ಹೈದರಾಬಾದ್ ಪರ ಪದಾರ್ಪಣೆ ಮಾಡಿದ ಪ್ರಫುಲ್ ಹಿಂಗೆ ಮೊದಲ ಓವರ್ ನಲ್ಲೇ ಮೂವರನ್ನು ಡಕೌಟ್ ಮಾಡಿ ದಾಖಲೆ ಮಾಡಿದರು.

ಡಕೌಟ್ ಆದ ನಿರಾಸೆಯಲ್ಲಿ ವೈಭವ್ ಸೂರ್ಯವಂಶಿ ಡಗೌಟ್ ನಲ್ಲಿ ತಮ್ಮ ಸಹ ಆಟಗಾರರೊಂದಿಗೆ ಮಂಕಾಗಿ ಕುಳಿತಿದ್ದರು. ಸದಾ ಹೊಡೆಬಡಿಯ ಆಟವಾಡುವ ವೈಭವ್ ನಿನ್ನೆ ಖಾತೆ ಕೂಡಾ ತೆರೆಯಲು ಸಾಧ್ಯವಾಗಿರಲಿಲ್ಲ ಎನ್ನುವುದು ಅವರನ್ನು ಕಾಡುತ್ತಿತ್ತು.

ಈ ವೇಳೆ ಕ್ಯಾಮರಾ ಮ್ಯಾನ್ ಅವರ ಕಡೆಗೆ ಫೋಕಸ್ ಮಾಡಿದಾಗ ಚಿಕ್ಕಮಕ್ಕಳಂತೆ ನಾಲಿಗೆ ಹೊರ ಹಾಕಿ ಛೇಡಿಸಿದ್ದಾರೆ. ಈ ವಿಡಿಯೋಗೆ ನೆಟ್ಟಿಗರು ಕಾಮೆಂಟ್ ಮಾಡಿದ್ದು ಬಹುಶಃ ಪ್ರಫುಲ್ ಹಿಂಗೆಗೆ ವೈಭವ್ ಈ ರೀತಿ ಮಾಡಿರಬೇಕು ಎಂದು ಕಾಲೆಳೆದಿದ್ದಾರೆ.


pic.twitter.com/fDqpQHILXw

 

— Anup barnwal (@amethiya_anup) April 13, 2026

Share this Story:

Follow Webdunia kannada

ಮುಂದಿನ ಸುದ್ದಿ

ಬುಮ್ರಾ ಆದ್ರೂ ಸರಿ, ಹೇಝಲ್ ವುಡ್ ಆದ್ರೂ ಸರಿ ಹೊಡೀತೀನಿ ಅಂದಿದ್ದ ವೈಭವ್ ಸೂರ್ಯವಂಶಿ ಡಕೌಟ್: ಟ್ರೋಲ್