Publish Date: Mon, 13 Apr 2026 (10:05 IST)
Updated Date: Mon, 13 Apr 2026 (10:07 IST)
ಮುಂಬೈ: ಐಪಿಎಲ್ 2026 ರಲ್ಲಿ ನಿನ್ನೆ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಅಂಪಾಯರ್ ದಿಡೀರ್ ಬಾಲ್ ಬದಲಾಯಿಸಿದ್ದಕ್ಕೆ ಟಿಮ್ ಡೇವಿಡ್ ಅನುಮಾನ ಬಂದು ಪರಿಶೀಲನೆ ಮಾಡುತ್ತಿದ್ದರೆ ಇತ್ತ ಅಂಪಾಯರ್ ಅಳುವುದೊಂದೇ ಬಾಕಿ. ಈ ಫನ್ನಿ ವಿಡಿಯೋ ಇಲ್ಲಿದೆ ನೋಡಿ.
ಮುಂಬೈ ಇಂಡಿಯನ್ಸ್ ವಿರುದ್ಧ ನಿನ್ನೆಯ ಪಂದ್ಯವನ್ನು ಆರ್ ಸಿಬಿ 18 ರನ್ ಗಳಿಂದ ಗೆದ್ದುಕೊಂಡಿದೆ. ಟಾಸ್ ಸೋತ ಆರ್ ಸಿಬಿ ಮೊದಲು ಬ್ಯಾಟಿಂಗ್ ಗಿಳಿಸಲ್ಪಟ್ಟಿತ್ತು. ಆರ್ ಸಿಬಿ ಬ್ಯಾಟಿಂಗ್ ವೇಳೆ ಅಂಪಾಯರ್ ದಿಡೀರ್ ಬಾಲ್ ಬದಲಾಯಿಸಿದ್ದಾರೆ.
ತೇವಾಂಶವಿದ್ದ ಕಾರಣ ಬಾಲ್ ಬೇಗ ಹಾಳಾಗಿತ್ತು. ಈ ವೇಳೆ ಕ್ರೀಸ್ ನಲ್ಲಿದ್ದ ಟಿಮ್ ಡೇವಿಡ್ ಬಾಲ್ ಪರಿಶೀಲನೆಗೆ ಮುಂದಾಗಿದ್ದರು. ಅಂಪಾಯರ್ ನಿಂದ ಬಾಲ್ ಕಸಿದುಕೊಂಡು ಬಾಲ್ ಹಾರಿಸಿ ಕೂಲಂಕುಷವಾಗಿ ಪರಿಶೀಲನೆ ಮಾಡುತ್ತಿದ್ದರು.
ಅಂಪಾಯರ್ ಗಳು ಹಾಗೆ ಮಾಡಬೇಡಿ ಎಂದು ಬಾಲ್ ಕಸಿಯಲು ಯತ್ನಿಸಿದರೂ ಕೊಡಲೇ ಇಲ್ಲ. ಅಂಪಾಯರ್ ಗಳು ಇನ್ನೇನು ಟಿಮ್ ಡೇವಿಡ್ ಕೈ ಕಾಲು ಹಿಡಿಯುವುದು ಬಾಕಿ. ಕೊನೆಗೆ ರೋಹಿತ್ ಶರ್ಮಾ ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಈ ಫನ್ನಿ ವಿಡಿಯೋ ಇಲ್ಲಿದೆ ನೋಡಿ.