Publish Date: Sun, 12 Apr 2026 (19:14 IST)
Updated Date: Sun, 12 Apr 2026 (19:16 IST)
ಮುಂಬೈ: ಐಪಿಎಲ್ 2026 ರಲ್ಲಿ ಇಂದು ರಾಯಲ್ ಚಾಲೆಂಜರ್ಸ್ ವಿರುದ್ಧ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ಮೊದಲು ಫೀಲ್ಡಿಂಗ್ ಆಯ್ದುಕೊಂಡಿದೆ.
ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯ ಇದಾಗಿದೆ. ಕಳೆದ ಪಂದ್ಯದಲ್ಲಿ ಸೋತಿದ್ದ ಆರ್ ಸಿಬಿ ಈಗ ಬಲಿಷ್ಠ ಮುಂಬೈ ತಂಡವನ್ನು ಅದರದ್ದೇ ನೆಲದಲ್ಲಿ ಸೋಲಿಸುವ ಉತ್ಸಾಹದಲ್ಲಿದೆ. ಇತ್ತ ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮ, ಜಸ್ಪ್ರೀತ್ ಬುಮ್ರಾರಂತಹ ಘಟಾನುಘಟಿಗಳನ್ನು ಒಳಗೊಂಡ ಮುಂಬೈ ತಂಡವೂ ಬಲಿಷ್ಠವಾಗಿದೆ.
ಮುಂಬೈ ಮೈದಾನದಲ್ಲಿ ಟಾಸ್ ಗೆದ್ದು ಫೀಲ್ಡಿಂಗ್ ಮಾಡುವ ತಂಡಕ್ಕೆ ಗೆಲುವಿನ ಅವಕಾಶ ಹೆಚ್ಚು. ಹೀಗಾಗಿ ಮುಂಬೈ ಮೊದಲು ಫೀಲ್ಡಿಂಗ್ ಆಯ್ದುಕೊಂಡಿದೆ. ಈ ಪಂದ್ಯಕ್ಕೆ ನಿರೀಕ್ಷೆಯಂತೇ ಆರ್ ಸಿಬಿ ಅಭಿನಂದನ್ ಸಿಂಗ್ ಅವರನ್ನು ಕೈ ಬಿಟ್ಟಿದೆ. ಉಳಿದಂತೆ ಎರಡೂ ತಂಡಗಳು ಹೀಗಿವೆ.
ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ, ರಿಯಾನ್ ರಿಕಲ್ಟನ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮ, ಹಾರ್ದಿಕ್ ಪಾಂಡ್ಯ, ನಮನ್ ಧೀರ್, ಮಿಚೆಲ್ ಸ್ಯಾಂಟ್ನರ್, ಶ್ರಾದ್ಧೂಲ್ ಠಾಕೂರ್, ಟ್ರೆಂಟ್ ಬೌಲ್ಟ್, ಮಯಾಂಕ್ ಮಾರ್ಖಂಡೆ, ಜಸ್ಪ್ರೀತ್ ಬುಮ್ರಾ.
ಆರ್ ಸಿಬಿ: ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ದೇವದತ್ತ ಪಡಿಕ್ಕಲ್, ರಜತ್ ಪಾಟೀದಾರ್, ಟಿಮ್ ಡೇವಿಡ್, ಜಿತೇಶ್ ಶರ್ಮಾ, ರೊಮಾರಿಯೋ ಶೆಫರ್ಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಜೇಕಬ್ ಡುಫೆ, ಸುಯಾಶ್ ಶರ್ಮಾ.